ಧವನ್​, ವಿಜಯ್​ ಶತಕ..! ಫೈಟ್​ ಬ್ಯಾಕ್​ ಮಾಡಿದ ಅಫ್ಘನ್ನರು

ಭಾರತ-ಅಫ್ಘಾನಿಸ್ತಾನ್​ ನಡುವೆ ಐತಿಹಾಸಿಕ ಟೆಸ್ಟ್​ ಕದನ ಬೆಂಗಳೂರಿನಲ್ಲಿಂದು ಆರಂಭವಾಗಿದೆ. ಮೊದಲ ದಿನದಾಟದಲ್ಲೇ ಎರಡು ಭರ್ಜರಿ ಸೆಂಚುರಿಗಳು ದಾಖಲಾಗಿವೆ.

ಎಡಗೈ ಓಪನರ್​ ಶಿಖರ್ ಧವನ್​ ಭರ್ಜರಿಯಾಗಿ ಬ್ಯಾಟ್​ ಬೀಸಿದ್ದಾರೆ. ಏಕದಿನ ಪಂದ್ಯದಂತೆ ಆಟವಾಡಿದ ಶಿಖರ್ ಕೇವಲ 96 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್​ಗಳೊಂದಿಗೆ 107 ರನ್​ ಗಳಿಸಿದರು. ಇನ್ನೂ, ಇನ್ನೊಬ್ಬ ಓಪನರ್​ ಮುರಳಿ ವಿಜಯ್​ 153 ಎಸೆತಗಳಲ್ಲಿ 105 ರನ್​ ಗಳಿಸಿದ್ದಾರೆ.

ಶಿಖರ್ ಧವನ್​ ಹಾಗೂ ಮುರುಳಿ ವಿಜಯ್​ ಅಬ್ಬರಕ್ಕೆ ಇದೇ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡ್ತಿರೋ ಅಫ್ಘಾನಿಸ್ತಾನ್​​​ ಸ್ಪಿನ್ನರ್​​ಗಳು ಮಂಕಾಗಿ ಹೋಗಿದ್ರು. ಆದ್ರೆ, ಈ ಇಬ್ಬರ ವಿಕೆಟ್​ಗಳು ಉರುಳಿದ ನಂತರ, ಅಫ್ಘಾನ್​ ಬೌಲರ್ಸ್​ ಮತ್ತೆ ತಮ್ಮ ಚಾರ್ಮ್​​​ಗೆ ಮರಳಿದ್ದಾರೆ.

ಕೆ.ಎಲ್​. ರಾಹುಲ್​ 54, ಚೇತೇಶ್ವರ್​ ಪೂಜಾರಾ 35 ರನ್​ ಗಳಿಸಿದ್ರೇ, ನಾಯಕ ಅಜಿಂಕ್ಯ ರಹಾನೆ 10 ಹಾಗೂ ದಿನೇಶ್​ ಕಾರ್ತಿಕ್​ ಕೇವಲ 4 ರನ್​ಗೆ ಔಟಾಗಿದ್ದಾರೆ. ದಿನದಾಟಕ್ಕೆ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಭಾರತ, 347 ರನ್​ ಗಳಿಸಿದೆ. ಹಾರ್ದಿಕ್​ ಪಾಂಡ್ಯಾ 10 ಹಾಗೂ ಆರ್​. ಅಶ್ವಿನ್​ 7 ರನ್​ ಗಳಿಸಿ ಬ್ಯಾಟ್​ ಮಾಡುತ್ತಿದ್ದಾರೆ. ಅಫ್ಘಾನ್​​ ಪರ ಯಾಮೀನ್​ ಅಹ್ಮದ್​ಜೈ 2, ವಫಾದಾರ್​, ರಶೀದ್​ ಖಾನ್​, ಮುಜೀಬ್​ ಉರ್​ ರಹಮಾನ್​ ತಲಾ 1 ವಿಕೆಟ್ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv