ನಕಲಿ ಮದ್ಯದ ಹೊಡೆತಕ್ಕೆ ಉತ್ತರ ಪ್ರದೇಶ ತತ್ತರ, ಮೃತರ ಸಂಖ್ಯೆ 70ಕ್ಕೆ ಏರಿಕೆ

ಲಕ್ನೋ: ಉತ್ತರಪ್ರದೇಶ ಮತ್ತು ನೆರೆಯ ಉತ್ತರಾಖಂಡ್​​​ನಲ್ಲಿ ನಕಲಿ ಮದ್ಯದ ಹಾವಳಿಗೆ ಸುಮಾರು 70ಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದಾರೆ. ‘ವ್ಯಕ್ತಿಯೊಬ್ಬ 30 ಪ್ಲಾಸ್ಟಿಕ್​ ಪೊಟ್ಟಣಗಳಲ್ಲಿ ಸಾರಾಯಿ ಹಂಚಿದ್ದು, ಅದನ್ನು ಸೇವಿಸಿ 36 ಮಂದಿ ಅಸುನೀಗಿದ್ದಾರೆ. ಒಂದೆರಡು ಸಾರಾಯಿ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ಶಹರಣಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ ಇನ್ನೂ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಏನಾಯಿತು?
ಮೂರು ದಿನಗಳ ಹಿಂದೆ, ಉತ್ತರಾಖಂಡ್​ದ ಶಹರಣಪುರ ಜಿಲ್ಲೆಯ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆದಿತ್ತು. ಆ ವೇಳೆ ಒಂದಷ್ಟು ಮಂದಿ ಸಾರಾಯಿ ಸೇವಿಸಿದ್ದಾರೆ. ಆದ್ರೆ ಅದು ನಕಲಿ ಸಾರಾಯಿ ಆಗಿತ್ತು. ಅಷ್ಟೇ ಅಲ್ಲದೆ, ಕೆಲವು ಮಂದಿ ಆ ನಕಲಿ ಸಾರಾಯಿಯನ್ನು ವಾಪಸ್​ ತಮ್ಮ ಊರುಗಳಿಗೂ ಕದ್ದುಮುಚ್ಚಿ ತಂದಿದ್ದಾರೆ. ಅದನ್ನು ಊರಿನಲ್ಲಿದ್ದ ಕೆಲ ಮಂದಿಗೂ ಹಂಚಿದ್ದಾರೆ. ಆ ಊರಿನವರೂ ಸಾರಾಯಿ ಸೇವಿಸಿದ್ದರಿಂದ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಖುಷಿನಗರ್​ ಎಂಬ ಗ್ರಾಮದಲ್ಲಿಯೂ ಇಂತಹುದೇ ನಕಲಿ ಸಾರಾಯಿ ಹಾವಳಿ ಕಂಡುಬಂದಿದ್ದು, ಇದರಿಂದಲೂ ಗ್ರಾಮಸ್ಥರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಖುಷಿನಗರ್​​ದಲ್ಲಿ ಸಾರಾಯಿಯನ್ನು ಪಕ್ಕದ ಬಿಹಾರದಿಂದ ಕದ್ದು ತರಲಾಗಿದೆ ಎನ್ನಲಾಗುತ್ತಿದೆ. ವಿಷಾದದ ಸಂಗತಿಯೆಂದ್ರೆ ಬಿಹಾರದಲ್ಲಿ ಸಾರಾಯಿ ನಿಷೇಧ ಜಾರಿಯಲ್ಲಿದೆ.
ಇನ್ನು, ನಕಲಿ ಸಾರಾಯಿ ಅಡ್ಡೆಗಳ ಮೇಲೆ ದಾಳಿ ನಡೆಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಪೊಲೀಸರಿಗೆ ಆದೇಶಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv