ಅಪ್ರಾಪ್ತ ಬಾಲಕನ ಹತ್ಯೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ

ರಾಯಚೂರು: ಆರು ವರ್ಷದ ಅಪ್ರಾಪ್ತ ಬಾಲಕನನ್ನು ಅಪಹರಿಸಿ, ಕೊಲೆಗೈದಿದ್ದ ಆರೋಪಿಗೆ ರಾಯಚೂರು 1ನೇ ಅಪರ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ದಿನಾಂಕ 9-02-2006 ರಂದು ಆರೋಪಿ ವೀರೇಶ್,​ ರಾಯಚೂರು ತಾಲ್ಲೂಕಿನ ಶಾಖವಾರಿ ಗ್ರಾಮದ ಬಾಲಕ ಮರಿಲಿಂಗನನ್ನು ಅಪಹರಿಸಿದ್ದ. ಅಲ್ಲದೇ ಬಾಲಕನ ಕಿವಿಯಲ್ಲಿದ್ದ ಬಂಗಾರದ ಮುರುಕನ್ನು (ಕಿವಿ ಓಲೆ) ಕಿತ್ತುಕೊಂಡು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಮಹದೇವಯ್ಯ ಆರೋಪಿಗೆ ₹1 ಲಕ್ಷ ದಂಡ ಹಾಗು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv