ಅಡಿಲೇಡ್ ಟೆಸ್ಟ್-ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 250/9

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ, ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್​ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ, ಉತ್ತಮ ಸ್ಟಾರ್ಟ್ ಸಿಗಲಿಲ್ಲ. ಆರಂಭಿಕ ಕೆ.ಎಲ್.ರಾಹುಲ್ ಕೇವಲ 2 ರನ್​ಗಳಿಸಿ ಹೆಜಲ್​ವುಡ್​ಗೆ ವಿಕೆಟ್ ಒಪ್ಪಿಸಿದ್ರೆ, ಮುರಳಿ ವಿಜಯ್ 11 ರನ್​ಗಳಿಸಿ ಸ್ಟಾರ್ಕ್ ಬೌಲಿಂಗ್​ನಲ್ಲಿ ಔಟಾದ್ರು. ನಂತರ ಬಂದ ನಾಯಕ ವಿಕೆಟ್ ಕೊಹ್ಲಿ 3 ರನ್​ಗಳಿಸಿದ್ದಾಗ ಉಸ್ಮಾನ್ ಖ್ವಾಜಾರ ಅದ್ಭುತ ಕ್ಯಾಚ್​ಗೆ, ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ರೆ, ಅಜಿಂಕ್ಯಾ ರಹಾನೆ 13 ರನ್​ಗಳಿಸಿ ನಾಯಕನನ್ನ ಹಿಂಬಾಲಿಸಿದ್ರು. ರೋಹಿತ್ ಶರ್ಮಾ 37 ರನ್, ರಿಷಬ್ ಪಂತ್ ಮತ್ತು ಆರ್.ಅಶ್ವಿನ್ ತಲಾ 25 ರನ್​ಗಳಿಸಿ ತಂಡಕ್ಕೆ ಅಲ್ಪ ಮೊತ್ತದ ಕಾಣಿಕೆ ನೀಡಿದ್ರು. ಕೊನೆಗೆ ಏಕಾಂಗಿ ಹೋರಾಟ ನಡೆಸಿದ ದಿ ವಾಲ್ ಚೆತೇಶ್ವರ್ ಪೂಜಾರ, ಭರ್ಜರಿ ಶತಕ ಸಿಡಿಸಿದ್ರು. ಟೆಸ್ಟ್ ಕ್ರಿಕೆಟ್​ನಲ್ಲಿ 16ನೇ ಶತಕ ಸಿಡಿಸಿದ ಪೂಜಾರ, 123 ರನ್​ಗಳಿಸಿದಾ್ ರನ್​ಔಟ್ ಆದ್ರು. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 87.5 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 250 ರನ್​ಗಳಿಸಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಹೇಜಲ್​ವುಡ್, ಕಮ್ಮಿನ್ಸ್ ಮತ್ತು ನಾಥನ್ ಲಾಯನ್ ತಲಾ 2 ವಿಕೆಟ್ ಪಡೆದ್ರು.