ಏರ್​ಪೋರ್ಟ್​ ನಡುಗಿಸಿದ ಪಿಂಕ್ ಬ್ಯಾಗ್..!

ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯ. ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಅಲ್ಲಿದ್ದ ಜನರೆಲ್ಲಾ ತಾವು ಪ್ರಯಾಣಿಸಬೇಕಾದ ಸ್ಥಳಗಳಿಗೆ ಹೋಗಲು ಬಂದಿದ್ದರು. ಹಾಗೇ ಎಲ್ಲಿಗೋ ಪ್ರಯಾಣಿಸಬೇಕಿದ್ದ ಮಹಿಳೆಯೋರ್ವರು ಟಾಯ್ಲೆಟ್​ಗೆ ಹೋಗಿ ಬರೋಣ ಅಂತಾ ಹೋಗಿದ್ದರು. ಟಾಯ್ಲೆಟ್​ಗೆ ಹೋದ ಆ ಮಹಿಳೆ ಬೆಚ್ಚಿಬಿದ್ದು ಓಡಿ ಬಂದಿದ್ದರು. ಅವರು ಯಾಕೆ ಗಾಬರಿಗೊಂಡು ಓಡಿದರು ಅನ್ನುವಷ್ಟರಲ್ಲಿಯೇ ವಿಮಾನ ನಿಲ್ದಾಣದಲ್ಲಿದ್ದ ಎಲ್ಲಾ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಬಂದ ದಾರಿಯನ್ನ ಹಿಡಿಯುವ ಯತ್ನದಲ್ಲಿದ್ದರು!

ಏನಾಗುತ್ತಿದೆ ಎಂದು ವಿಚಾರಿಸುವಷ್ಟರಲ್ಲಿಯೇ ಇಡೀ ವಿಮಾನ ನಿಲ್ದಾಣ ಆತಂಕದಿಂದ ನಿಶ್ಯಬದ್ಧಕ್ಕೆ ಜಾರಿದಂತಹ ಅನುಭವ ಅಲ್ಲಿನ ಪ್ರಯಾಣಿಕರಿಗೆ ಆಗಿತ್ತು. ಸ್ವಲ್ಪ ಸಮಯದಲ್ಲೇ ರಕ್ಷಣಾ ಪಡೆ, ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ದೌಡಾಯಿಸಿ ಭಯದಿಂದಲೇ ಲೇಡಿಸ್ ಟಾಯ್ಲೆಟ್​ಗೆ ನೇರವಾಗಿ ನುಗ್ಗಿ ಬಿಟ್ಟಿದ್ದರು.

ಪಿಂಕ್ ಬ್ಯಾಗ್ ಸೃಷ್ಟಿಸಿದ ಆತಂಕ..!

ಟಾಯ್ಲೆಟ್​ಗೆ ಹೋಗಿದ್ದ ಮಹಿಳೆಯ ಕಣ್ಣಿಗೆ ಪಿಂಕ್ ಬ್ಯಾಗ್​ ಕಂಡಿತ್ತು. ಇದರಿಂದ ಅನುಮಾನಗೊಂಡ ಮಹಿಳೆ ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದಾಳೆ. ಸಿಬ್ಬಂದಿ ಯಾರೋ ಬಾಂಬ್ ಇಟ್ಟಿದ್ದಾರೆ ಅಂತಾ ಬಾಂಬ್ ನಿಸ್ಕ್ರಿಯ ದಳದ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅನಾಹುತ ತಪ್ಪಿಸಬೇಕು ಅಂತಾ  ಓಡೋಡಿ ಬಂದ ರಕ್ಷಣಾ ಪಡೆಗೂ ಬಿಗ್ ಶಾಕ್ ಕಾದಿತ್ತು.

ಬಾಂಬ್ ಅಲ್ಲ ಅದು..ಏನಾಗಿತ್ತು..?

ಪಿಂಕ್ ಬ್ಯಾಗ್​ನತ್ತ ಬಂದ ಪೊಲೀಸರು ಅನುಮಾನದಿಂದಲೆ ಓಪನ್ ಮಾಡಿದ್ದಾರೆ. ತೆಗೆದು ನೋಡಿದಾಗ ಬ್ಯಾಗಿನೊಳಗೆ ಬಾಂಬ್ ಇರಲಿಲ್ಲ. ಬದಲಾಗಿ ಅಲ್ಲಿದ್ದದ್ದು ಮೊಲ. ಬಾಂಬ್ ಅಂತಾ ಬ್ಯಾಗ್ ಭಯದಿಂದ ಓಪನ್ ಮಾಡಿದ ಅಧಿಕಾರಿಗಳು ಮೊಲವನ್ನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

ನಂತರ ಟಾಯ್ಲೆಟ್​ನಲ್ಲಿದ್ದ ಒಂದು ವರ್ಷದ ಮೊಲವನ್ನ ರಕ್ಷಣೆ ಮಾಡಿದ್ದಾರೆ. ಹಾಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಯಾರು..? ಯಾಕೆ ತಂದು ಬಿಟ್ಟಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv