ಸರ್ಕಾರದ ಹೆಸರಲ್ಲಿ ನಕಲಿ ಆದೇಶ, ಬಿಇಓ ವಿರುದ್ಧ ಎಫ್​ಐಆರ್​

ಚಾಮರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯ್ತುಕ ಕಚೇರಿ ಹೆಸರಲ್ಲಿ ತಾನೇ ಆದೇಶ ಪ್ರತಿ ತಯಾರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಗುಂಡ್ಲುಪೇಟೆ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಬಿಇಓ ಸೋಮಶೇಖರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಹೆಚ್​ಡಿ‌ ಕೋಟೆಯ ಆರ್ಯ ಪುಟ್​ವೇರ್ ಮಾಲೀಕತ್ವದ ಅಂಗಡಿಯಿಂದ ವಿದ್ಯಾರ್ಥಿಗಳಿಗೆ ಶೂಗಳನ್ನು ಖರೀದಿ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ ಬಂದಿದೆ ಅಂತಾ ಹೇಳಿದ್ದ ಸೋಮಶೇಖರ್​ ತಾವೇ ಸ್ವತಃ ಸರ್ಕಾರದ ಹೆಸರಲ್ಲಿ ನಕಲಿ ಆದೇಶವೊಂದನ್ನ ಸೃಷ್ಟಿಸಿದ್ದಾರೆ ಎನ್ನುವುದು ಆರೋಪ. ಈ ಸಂಬಂಧ ಇದೀಗ ಬಿಇಓ ಸೋಮಶೇಖರ್ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವ ಪೊಲೀಸರು ಇವರ ಜೊತೆಯಲ್ಲಿ ಹೆಲ್ತ್‌ ಪ್ಲಾನೆಟ್​ನ ಮಾಲೀಕ ಮುರುಳಿಧರ್​ ವಿರುದ್ಧವೂ ಕೇಸ್​ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *