ಮೋದಿಯಂತಹ ಕ್ರಿಮಿನಲ್ ಯಾರೂ ಇಲ್ಲ -ತೆಲುಗು ನಟಿ ವಿಜಯಶಾಂತಿ

ಕಲಬುರ್ಗಿ: ಮೋದಿಯಂತ ಕ್ರಿಮಿನಲ್ ಯಾರೂ ಇಲ್ಲ ಅಂತಾ ತೆಲುಗು ನಟಿ ವಿಜಯಶಾಂತಿ ಆರೋಪಿಸಿದ್ದಾರೆ. ಕ್ಷೇತ್ರದಲ್ಲಿನ ತೆಲುಗು ಭಾಷಿಕ ಮತಗಳನ್ನು ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಈ ಹಿನ್ನೆಲೆ ಸೇಡಂ ತಾಲೂಕಿನ ಮುಧೋಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆಲುಗು ನಟಿ, ಕಾಂಗ್ರೆಸ್ ನಾಯಕಿ ವಿಜಯಶಾಂತಿರನ್ನು ಕೈ ನಾಯಕರು ಕರೆತಂದಿದ್ರು. ಲೋಕಸಭಾ‌ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ತೆಲುಗು ಭಾಷೆಯಲ್ಲಿ ಚುನಾವಣಾ ಪ್ರಚಾರ ಮಾಡಿದ್ರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರು ದುಡ್ಡು ಕೊಟ್ರೆ ತಗೊಳ್ಳಿ, ವೋಟ್ ಮಾತ್ರ ಕಾಂಗ್ರೆಸ್‌ಗೆ ಹಾಕಿ ಅಂತಾ ಹೇಳಿದ್ರು. ಬಿಜೆಪಿಯಿಂದ ನನ್ನ ರಾಜಕೀಯ ಜೀವನ ಆರಂಭವಾಗಿರುವದ್ರಿಂದ ಹೇಳ್ತಿದ್ದೇನೆ. ಈ ಚುನಾವಣೆ ರಾಹುಲ್ ಮತ್ತು ಮೋದಿ ನಡುವಿನ ಯುದ್ಧ. ರಾಹುಲ್ ಪಕ್ಷದಲ್ಲಿ ನ್ಯಾಯ ಇದೆ, ಮೋದಿ ಪಕ್ಕದಲ್ಲಿ ಅನ್ಯಾಯ ಇದೆ. 5 ವರ್ಷದಲ್ಲಿ ಮೋದಿ ಸಾಧನೆ ಶೂನ್ಯವಾಗಿದೆ. ಪ್ರಧಾನಿಗೆ ಇರಬೇಕಾದ ಲಕ್ಷಣ ಮೋದಿ ಬಳಿ ಇಲ್ಲ. ಅವರಿಗೆ ಸುಳ್ಳು ಹೇಳುವುದೇ ಕಾಯಕವಾಗಿದೆ ಅಂತಾ ಆರೋಪಿಸಿದರು.