‘ದರ್ಶನ್‌ಗೆ ಹೀರೋಯಿನ್ ಆಗ್ಬೇಕಿತ್ತು..ಆದ್ರೆ’

ತುಪ್ಪದ ಬೆಡಗಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಕಂಪ್ಲೀಟ್ ಮಾಡಿದ್ದು, ಈಗ ಒಂದು ಸಾರಿ ಅವರ ಜರ್ನಿ ತಿರುಗಿ ನೋಡಿದ್ರೆ ಹಲವು ವಿಚಾರಗಳನ್ನ ನೆನೆದು ಹಂಚಿಕೊಂಡಿದ್ದಾರೆ. 2008ರಲ್ಲಿ ವೀರಮದಕರಿ ಚಿತ್ರದ ಮೂಲಕ ಕಿಚ್ಚ ಸುದೀಪ್‌ಗೆ ಹೀರೋಯಿನ್ ಆಗಿ ಬೆಳ್ಳಿತೆರೆ ಪ್ರವೇಶಿಸಿದ ರಾಗಿಣಿ ಇತ್ತೀಚೆಗೆ ತೆರೆಕಂಡ ಟೆರರಿಸ್ಟ್ ಸಿನಿಮಾಗಳವರೆಗೂ ಟಾಪ್‌ ನಟರಿಂದ ಹಿಡಿದು, ಯಂಗ್‌ಸ್ಟಾರ್ಸ್, ಹೊಸ ಹೀರೋಗಳ ಜೊತೆಗೂ ಹೀರೋಯಿನ್ ಆಗಿದ್ದಾರೆ. ಆದ್ರೆ ಅವರೊಬ್ರನ್ನ ಬಿಟ್ಟು. ಅವರೇ ಚಾಲೆಂಜಿಂಗ್ ಸ್ಟಾರ್ ದರ್ಶನ್.ರಾಗಿಣಿ ಅಂದ್ರೆ 5.8 ಅಡಿ ಹೈಟು..ಕಣ್ಸೆಳೆಯೋ ಬಳುಕೋ ಬಳ್ಳಿಯಂಥಾ ಮೈಮಾಟ. ಇನ್ನು ದರ್ಶನ್ 6 ಅಡಿ ಕಟೌಟ್. ಇಬ್ರೂ ತೆರೆಮೇಲೆ ಜೊತೆಯಾದ್ರೇ ಕೇಳೋದೆ ಬೇಡ. ಪ್ರೇಕ್ಷಕರಿಗೆ ಹಬ್ಬ. ಇಬ್ರೂ ತೆರಮೇಲೆ ಜೋಡಿಯಾಗಲಿ ಅಂತಾ ಇವರಿಬ್ರ ಫ್ಯಾನ್ಸ್ ತುಂಬಾ ಕಾದ್ರೂ, ಅವರಾಸೆ ಕೈಗೂಡಿಲ್ಲ. ಈ ಬಗ್ಗೆ ಮಾತಾಡಿದ ರಾಗಿಣಿ

‘ಹೌದು. ನಾನು ಕನ್ನಡದ ಎಲ್ಲಾ ಎತ್ತರದ ನಟರ ಜೊತೆನೂ ಆ್ಯಕ್ಟ್ ಮಾಡಿದ್ದೀನಿ. ಸೀನಿಯರ್ಸ್, ಯಂಗ್ ಹೀರೋ, ಹೊಸಬರು ಎಲ್ಲರ ಜೊತೆ ನಟಿಸಿದ್ದೀನಿ. ಅವರೊಬ್ರನ್ನ ಬಿಟ್ಟು. ಆ ಆಸೆ ಇನ್ನೂ ಇದೆ. ಹಾಗೆ ನೋಡಿದ್ರೆ ದರ್ಶನ್‌ ನಂಗೆ ತುಂಬಾ ಕ್ಲೋಸ್ ಫ್ರೆಂಡ್. ಅವರ ಮೇಲೆ ನಂಗೆ ತುಂಬಾ ಗೌರವ. ತುಂಬಾ ಕಡೆ ಒಟ್ಟಿಗೇ ಪರ್ಫಾರ್ಮೆನ್ಸ್ ಕೊಟ್ಟಿದ್ದೀವಿ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಮೀಟ್ ಆಗ್ತಿವಿ. ಆದ್ರೆ ಸರಿಯಾದ ಸರಿಯಾದ ಟೈಂ ಹಾಗೂ ಸಿನಿಮಾ ಬಂದಿಲ್ಲ. ಇಲ್ಲಾಂದ್ರೆ ಇಷ್ಟೊತ್ತಿಗಾಗಲೇ ಅವರ ಜೊತೆ 3-4 ಸಿನಿಮಾಗಳಲ್ಲಿ ನಾನು ಹೀರೋಯಿನ್ ಆಗಿ ನಟಿಸಿರಬೇಕಿತ್ತು. ನಿಜ ಹೇಳಬೇಕು ಅಂದ್ರೆ ಒಂದು ಪಿಕ್ಚರ್‌ಗೆ ದರ್ಶನ್‌ ಜೊತೆ ಆಕ್ಟ್ ಮಾಡೋಕೆ ಸೈನ್ ಮಾಡಿದ್ದೆ. ಒಂದು ಕಾರಣದಿಂದ ಅದು ಕೈಗೂಡಲಿಲ್ಲ. ನಂತ್ರ ಯಾವುದೂ ಸರಿಯಾದ ಚಿತ್ರಕಥೆ ಬಂದಿಲ್ಲ. ಕರೆಕ್ಟ್ ಟೈಂ, ಕಥೆ ಬಂದ್ರೆ ಖಂಡಿತ ಒಟ್ಟಿಗೇ ಸಿನಿಮಾ ಮಾಡ್ತಿವಿ’ ಅಂದ್ರು.