ಕಾರು ಅಪಘಾತದಲ್ಲಿ ನರಳಾಡ್ತಿದ್ದ ಖ್ಯಾತ ನಟಿ, ಜನ ಮಾತ್ರ ಸಹಾಯಕ್ಕೆ ಬರಲಿಲ್ಲ..!

ಕೇರಳ: ಮಲೆಯಾಳಂ ಜನಪ್ರಿಯ ನಟಿ ಮೇಘಾ ಮ್ಯಾಥ್ಯೂ ಕಾರು ಅಪಘಾತದಲ್ಲಿ ಸಿಲುಕಿಕೊಂಡು ನರಳಾಡಿರೋ ಘಟನೆ ಕೇರಳದಲ್ಲಿ ನಡೆದಿದೆ. ಕೊಚ್ಚಿಯಿಂದ ಪ್ರಯಾಣಿಸುತ್ತಿದ್ದ ನಟಿಯ ಕಾರು ಎರ್ನಾಕುಲಂ ಬಳಿ ಅಪಘಾತಕ್ಕೀಡಾಗಿದೆ.

ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಕಾರು, ಮೇಘಾ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ತೀವ್ರತೆ ಗಮನಿಸಿದರೆ ಪ್ರಾಣಕ್ಕೇ ಕುತ್ತುಂಟಾಗಬಹುದಾಗಿತ್ತು. ಅದೃಷ್ಟವಶಾತ್ ನಟಿ ಮೇಘಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಮೇಘಾರ ಕಾರಿನಲ್ಲಿ ಅಳವಡಿಸಲಾಗಿದ್ದ ಏರ್‌ ಕಾರ್ ಸೆಫ್ಟಿ ಅವರನ್ನ ಬದುಕಿಸಿದೆ! ಎನ್ನಲಾಗುತ್ತದೆ.

ಸಹಾಯಕ್ಕೆ ಬಾರದ ಜನ್ರು..!
ಆಶ್ಚರ್ಯ ಅಂದ್ರೆ 15 ನಿಮಿಷ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ನಟಿ ಕಾರಿನಲ್ಲೇ ಬಿದ್ದಿದ್ದರು. ಆಗ, ನಟಿ ಸಾವನ್ನಪ್ಪಿರಬಹುದು ಅಂತಾ ಜನ ಭಾವಿಸಿದರು. ಆದರೆ ಪ್ರಜ್ಞೆ ಬಂದ ಮೇಲೂ ಒಂದು ಗಂಟೆ ಕಾಲ ಕಾರಿನಲ್ಲೇ ಇದ್ದರೂ, ನಟಿಯ ಸಹಾಯಕ್ಕೆ ಯಾರೊಬ್ಬರೂ ಬಂದಿಲ್ಲ! ಬಳಿಕ ಫೊಟೋಗ್ರಾಫರ್‌ ಒಬ್ಬರು ನಟಿಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಹೋದರನ ನಿಶ್ಚಿತಾರ್ಥಕ್ಕೆಂದು ಕೊಚ್ಚಿಯಲ್ಲಿರೋ ತನ್ನ ಫ್ಲ್ಯಾಟ್‌ನಿಂದ ಮೇಘಾ ಸೋದರನ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contcact@firstnews.tv