ನನ್ನ ನೋಡಿ ರಿಷಬ್ ನಾಚಿನೀರಾದ್ರು! ನಾನಂತೂ ಮಜಾ ತಗೊಂಡೆ!

ರಿಷಬ್‌ಶೆಟ್ಟಿ ಹರಿಪ್ರಿಯಾ ಕಾಂಬಿನೇಶನ್‌ನಲ್ಲಿ ತೆರೆಕಂಡು ಯಶಸ್ವಿ 50 ದಿನಗಳನ್ನ ಪೂರೈಸಿರೋ ಚಿತ್ರ ಬೆಲ್‌ಬಾಟಂ. ಇವ್ರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಿದ ಪ್ರೇಕ್ಷಕ ಎಂಥಾ ಕ್ಯೂಟ್ ಜೋಡಿ. ಹಿಂಗೇ ತೆರೆಮೇಲೆ ರಿಷಬ್‌ಗೆ ಹರಿಪ್ರಿಯಾ ಬೊಗಸೆ ತುಂಬಾ ಪ್ರೀತಿ ಕೊಟ್ಟು ನಮ್ಮನ್ನ ರಂಜಿಸಲಿ ಅಂತಾ ಅನ್ಕೊಂಡವರಿಗೇನು ಕಡಿಮೆಯಲ್ಲ. ಆದ್ರೆ,ತೆರೆಮೇಲೆ ಪ್ರೇಮಿಗಳಾಗಿರೋ ರಿಷಬ್, ಹರಿಪ್ರಿಯಾ ಅಸಲಿಗೆ ಮೊದಲಿಂದಲೂ ತುಂಬಾ ಒಳ್ಳೇ ಫ್ರೆಂಡ್ಸ್. ಪರ್ಫಾರ್ಮೆನ್ಸ್‌, ಆಕ್ಟಿಂಗ್ ವಿಚಾರಕ್ಕೆ ಬಂದ್ರೆ ಇಬ್ರಲ್ಲೂ ಹೆಲ್ದಿ ಕಾಂಪಿಟಿಷನ್ ಇದ್ಯಂತೆ. ಹಿಂಗಾಗೇ ಇದೊಂದು ಸೀನ್ ಶೂಟಿಂಗ್‌ ಟೈಮ್‌ನಲ್ಲಿ ರಿಷಬ್‌ ಹರಿಪ್ರಿಯಾ ಕಂಡು ನಾಚಿ ನೀರಾಗಿ, ಪರದಾಡ್ತಿದ್ರೆ, ಹರಿಪ್ರಿಯಾ ಮಾತ್ರ ನೋಡಿ ಮಜಾ ತಗೊಂಡಿದ್ರಂತೆ. ಹಾಗಂತ ಅವರೇ ಚಿತ್ರದ ಸಕ್ಸಸ್‌ಮೀಟ್‌ನಲ್ಲಿ ಹೇಳಿಕೊಂಡ್ರು.

ಎಡಿಟ್‌ ಸೀನ್‌ ಕಥೆ ಏನು..?

ಡಿಟೆಕ್ಟಿವ್ ದಿವಾಕರನ ಕಾರ್ಯಾಚರಣೆ ಮುಖ್ಯಸ್ಥಳ ಹಳೇ ಮನೆಯ ಅಟ್ಟ. ಟ್ರೈಲರ್‌ನಲ್ಲಿ ಭೂತಕನ್ನಡಿ ಹಿಡಿದು, ಕುರ್ಚಿ ಮೇಲೆ ಕೂತ ರಿಷಬ್‌ನ ನೋಡಿದವರಿಗೆ ತಿಳಿದಿರುತ್ತೆ. ಆ ಸಣ್ಣ ಜಾಗದಲ್ಲೇ 2 ಮೂಲೆಗಳಲ್ಲಿ ನಿಂತು ಕುಸುಮಾನ ನೆನೆದು ರಿಷಬ್ ಡ್ಯಾನ್ಸ್ ಮಾಡೋ ಸೀನ್ ಶೂಟಿಂಗ್ ಆಗ್ತಿತ್ತು. ಆಗ ಎದುರಿಗೇ ಇದ್ದ ಹರಿಪ್ರಿಯಾ ನೋಡಿ ರಿಷಬ್‌ ಅದೆಷ್ಟು ನಾಚಿ ನೀರಾದ್ರು.ಮೊದಲೇ ಡ್ಯಾನ್ಸ್ ಮಾಡೋಕೆ ಕಷ್ಟ ಪಡೋ ರಿಷಬ್ ಒಂದ್ಸಲ ಹರಿಪ್ರಿಯಾನ ಕಿರುಗಣ್ಣಲ್ಲಿ ನೋಡೋದು, ಮೈಕೈ ಕುಣಿಸೋದು, ಇನ್ನೊಂದು ಸುತ್ತ ನೋಡೋದು ಡ್ಯಾನ್ಸ್ ಮಾಡೋದು ಮಾಡಿದ್ದಾರೆ. ಆದ್ರೆ ಇದೆಲ್ಲಾ ನೋಡ್ತಿದ್ದ ಹರಿಪ್ರಿಯಾ ಮಾತ್ರ ಸಖತ್ ಮಜಾ ತಗೊಂಡಿದ್ದಾರೆ. ಆದ್ರೆ ಈ ಸೀನ್‌ ಸಿನಿಮಾದಲ್ಲಿಲ್ಲ. ಅದನ್ನ ಎಡಿಟ್ ಮಾಡಲಾಗಿದೆ.

ಎಷ್ಟೇ ಫ್ರೆಂಡ್ಸ್ ಆದ್ರೂ ಇಬ್ರಿಗೂ ಡ್ಯಾನ್ಸ್‌ ಮಾಡುವಾಗ,ಡಿಫ್ರೆಂಟ್ ಆಗಿ ನಟಿಸುವಾಗ ಸ್ವಲ್ಪ ಮುಜುಗರ , ಹಿಂಜರಿಕೆ ಇದ್ದೇ ಇತ್ತು. ಓ.. ನೋಡ್ತಿದಾರಪ್ಪಾ ಚೆನ್ನಾಗಿ ಆಕ್ಟ್ ಮಾಡ್ಬೇಕು ಅಂತೆಲ್ಲಾ. ರಿಷಬ್ ತುಂಬಾ ಕಾನ್ಶಿಯಸ್ ಆಗಿದ್ದನ್ನ ನಾನ್ ನೋಡಿದೆ ಅಂತಾ ಕಿಚಾಯಿಸಿದ್ರು ಹರಿಪ್ರಿಯಾ. ಇದನ್ನ ಕೇಳಿ ರಿಷಬ್ ಹೌದು, ನಂಗೆ ಡ್ಯಾನ್ಸ್ ಬರಲ್ಲ. ನಾನು ಆಕ್ಟಿಂಗ್ ವಿಚಾರದಲ್ಲಿ ಅನಂತ್‌ನಾಗ್ ಅವರ ಅಭಿಮಾನಿ. ಅದಕ್ಕೆ ಡೈರೆಕ್ಟರ್‌ಗಳಿಗೆ ರಿಕ್ವೆಸ್ಟ್ ಮಾಡ್ತಿನಿ. ಪ್ಲೀಸ್ ಡ್ಯಾನ್ಸ್ ಎಲ್ಲಾ ಬೇಡ. ಪಂಚೆ ಕೊಡಿ.. ಹೀರೋಯಿನ್ ಡ್ಯಾನ್ಸ್ ಮಾಡ್ತಿದ್ರೆ, ನಾನ್ ಹಂಗೇ ಹಿಂದೆ ನಡೆದುಕೊಂಡು ಹೋಗಿಬಿಡ್ತಿನಿ ಸಾಕು ಅಂತಾ ಹಾಸ್ಯಚಟಾಕಿ ಹಾರಿಸಿದ್ರು.