‘ಈಗ ನನ್ನ ಜನ ಕಳ್‌ಬಟ್ಟಿ ಕುಸುಮಾ ಅಂತಾನೇ ಕರೀತಾರೆ’

ರಿಷಬ್‌ ಶೆಟ್ಟಿ ಚೊಚ್ಚಲ ಬಾರಿಗೆ ಹೀರೋ ಆಗಿ ಹರಿಪ್ರಿಯಾ ಜೊತೆ ನಟಿಸಿ ಜನಮನ ಗೆದ್ದಿರುವ ಸಿನಿಮಾ ಬೆಲ್‌ಬಾಟಂ. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಪ್ರೇಕ್ಷಕರನ್ನ 80ರ ದಶಕಕ್ಕೆ ಕರೆದೊಯ್ದು ಮನರಂಜಿಸಿದ್ದು ಯಶಸ್ವಿ 50 ದಿನಗಳನ್ನ ಪೂರೈಸಿದೆ. ಇದೇ ಖುಷಿಯಲ್ಲೇ ಸಕ್ಸಸ್‌ಮೀಟ್ ಮಾಡಿದ ಚಿತ್ರತಂಡ ಖುಷಿ ಹಂಚಿಕೊಂಡಿತು.

ಪ್ರೇಕ್ಷಕನ ರೆಸ್ಪಾನ್ಸ್‌ ನೋಡಿ ಹರಿಪ್ರಿಯಾ ಥ್ರಿಲ್!
ಚಿತ್ರ ಯಶಸ್ವಿ 50 ದಿನ ಪೂರೈಸಿದೆ. ಎಲ್ಲಾ ಕಡೆಯಿಂದಲೂ ಉತ್ತಮವಾದ ರೆಸ್ಪಾನ್ಸ್ ಇದೆ. ಅದ್ರಲ್ಲೂ ಯುಎಸ್, ದುಬೈನಲ್ಲಿ ರಿಪೀಟೆಡ್ ಶೋ ಕೇಳಿ ರಿಲೀಸ್ ಮಾಡಿಸಿಕೊಂಡ್ರು. ಎಲ್ಲರಿಗೂ ಥ್ಯಾಂಕ್ಸ್. ಸಿನಿಮಾ ಎಷ್ಟರ ಮಟ್ಟಿಗೆ ಜನರ ಮನಸಿನಲ್ಲಿ ಉಳಿದಿದೆ ಅಂದ್ರೆ, ನಾವು ಥಿಯೇಟರ್‌ ವಿಸಿಟ್‌ಗೆ ಹೋದಾಗ ರಿಷಬ್‌ನ ನೋಡ್ತಿದ್ದಂಗೆ ಜನ ಡಿಟೆಕ್ಟಿವ್ ದಿವಾಕರ ಅಂತಿದ್ರು. ಇನ್ನು ನನ್ನ ನೋಡಿ ಕಳ್‌ಬಟ್ಟಿ ಕುಸುಮಾ ಅಂತಾ ಕರೀತಿದ್ರು. ಹೀಗೆ ಎಲ್ರನ್ನೂ ಅವರ ಪಾತ್ರಗಳ ಮೂಲಕ ಗುರುತಿಸ್ತಿದ್ರು. ಯಾವಾಗ ಜನ ಒಬ್ಬ ಕಲಾವಿನದನನ್ನ ಅವರು ಮಾಡಿರೋ ಪಾತ್ರದ ಮೂಲಕ ಗುರುತಿಸುತ್ತಾರೋ ಅಲ್ಲೇ ಅರ್ಧ ಗೆದ್ದಂಗೆ. ಈ ವರ್ಷದ ಮೊದಲ ಸಿನಿಮಾನೇ ಗೆದ್ದಿದೆ ಅಂದ್ರು.