ಲೂಸ್ ಮಾದ ಖ್ಯಾತಿಯ ಯೋಗೀಶ್ ತಂದೆ ಮೇಲೆ ವಂಚನೆ ಆರೋಪ

ಬೆಂಗಳೂರು: ಲೂಸ್ ಮಾದ ಖ್ಯಾತಿಯ ಯೋಗೀಶ್ ತಂದೆಯ ಮೇಲೆ ವಂಚನೆ ಆರೋಪ ಕೇಳಿಬಂದಿದೆ. ಯೋಗೇಶ್ ತಂದೆ ಟಿ.ಪಿ.ಸಿದ್ದರಾಜು ಮೇಲೆ ಆರೋಪ ಕೇಳಿ ಬಂದಿದ್ದು, ಐದು ಲಕ್ಷ ರೂಪಾಯಿ ತೆಗೆದುಕೊಂಡು ಮೋಸ ಮಾಡಿರುವುದಾಗಿ ನಿರ್ಮಾಪಕ ಗವಿಪುರಂ ಆರ್ ಮರಿಸ್ವಾಮಿ ಅವರು ಆರೋಪಿಸಿದ್ದಾರೆ.

ಜಡೇಜಾ ರವಿ ಎಂಬ ಸಿನಿಮಾಕ್ಕೆ ಐದು ಲಕ್ಷ ತೆಗೆದುಕೊಂಡು ಸಿದ್ದರಾಜು ಮೋಸ ಮಾಡಿದ್ದಾರೆ ಅಂತಾ ಮರಿಸ್ವಾಮಿ ಆರೋಪಿಸಿದ್ದಾರೆ. ಮರಿಸ್ವಾಮಿ ಸಿನಿಮಾಗಳಿಗೆ ಇಡ್ಲಿ ಸಪ್ಲೆ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಈ ಹಿಂದೆ ಎರಡು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ರು. ದುಡ್ಡು ವಾಪಾಸ್​ ನೀಡುವ ವಿಚಾರದಲ್ಲಿ ಲೂಸ್ ಮಾದ ಯೋಗೇಶ್ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಐದು ವರ್ಷಗಳಿಂದ ದುಡ್ಡಿಗಾಗಿ ಅವರ ಹಿಂದೆ ಗೋಗರೆದಿದ್ದೇನೆ ಅಂತಾ ಮರಿಸ್ವಾಮಿ ಹೇಳಿದ್ರು. ಐದು ವರ್ಷಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಸಿನಿಮಾ ರಂಗವನ್ನು ಮರಿಸ್ವಾಮಿ ತೊರೆದಿದ್ದರು. ಸದ್ಯ ಮರಿಸ್ವಾಮಿ ಪಾರ್ಶ್ವವಾಯುಗೆ ತುತ್ತಾಗಿ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv