2 ವರ್ಷದ ಹಿಂದೆ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು ನಿಜ: ನಟ ಯಶ್‌

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್‌ ಹತ್ಯೆಗೆ ನಡೆದಿದೆ ಎನ್ನಲಾದ ಮಾತುಕತೆ ಬಗ್ಗೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ ನಡೀತಿದೆ. ಸಿಸಿಬಿ ವಶದಲ್ಲಿರುವ ರೌಡಿಶೀಟರ್‌ ಸೈಕಲ್ ರವಿ, ಕುಡಿದ ಮತ್ತಿನಲ್ಲಿ ಯಶ್‌ರನ್ನ ಕೊಲೆ ಮಾಡಬೇಕು ಎಂದು ಕೋದಂಡ ಹೇಳಿದ್ದಾನೆ ಅಂತಾ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘2 ವರ್ಷದ ಹಿಂದೆ ನನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು ನಿಜ. ಆ ಘಟನೆಯ ನಂತರ ನಾನು ಪೊಲೀಸ್ ಕಮೀಷನರ್‌ ಅವರನ್ನ ಭೇಟಿಯಾಗಿ, ಮೌಖಿಕವಾಗಿ ದೂರು ನೀಡಿದ್ದೇ. ಅದಾದ ಮೇಲೆ ಏನಾಯ್ತು ಅನ್ನೋದು ನನಗೆ ಗೊತ್ತಿಲ್ಲ. ಹತ್ಯೆ ಬಗ್ಗೆ ಮಾತುಕತೆ ನಡೆದಿದೆ ಅನ್ನೋದರ ಬಗ್ಗೆ ನನಗೆ ಪೊಲೀಸರಿಂದ ಯಾವುದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕವಷ್ಟೇ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ನಾನು ಈ ವಿಚಾರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡೋದಿಲ್ಲ. ಒಂದು ವೇಳೆ ಹತ್ಯೆಗೆ ಸ್ಕೆಚ್‌ ನಡೆದಿದ್ರೆ ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.