ಐಟಿ ವಿಚಾರಣೆಗೆ ತಾಯಿಯೊಂದಿಗೆ ಆಗಮಿಸಿದ ಯಶ್​..!

ಬೆಂಗಳೂರು: ತಮ್ಮ ಮನೆ ಮೇಲೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಯಶ್, ತಾಯಿ ಪುಷ್ಪಾರೊಂದಿಗೆ ವಿಚಾರಣೆಗಾಗಿ ಐಟಿ ಕಚೇರಿಗೆ ಆಗಮಿಸಿದ್ದಾರೆ. ಜನವರಿ 3 ರಂದು ಯಶ್​ ಮನೆ ಮೇಲೆ ರೇಡ್ ನಡೆಸಿದ್ದ ಅಧಿಕಾರಿಗಳು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ರು. ಈ ಸಂಬಂಧ ನಟ ಯಶ್​ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್​ ಕೂಡ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ಯಶ್​ ಇಂದು ಅವರ ತಾಯಿಯೊಂದಿಗೆ ಬೆಂಜ್​ ಕಾರ್​ನಲ್ಲಿ ಐಟಿ ಕಚೇರಿಗೆ ಆಗಮಿಸಿದ್ದಾರೆ. ಇನ್ನು ನಿನ್ನೆಯಷ್ಟೇ ಯಶ್ ಆಡಿಟರ್ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶೇಷಾದ್ರಿಪುರಂನಲ್ಲಿರುವ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.