ಗಮನ ಬೇರೆಡೆ ಸೆಳೆದು, ವಿನೋದ್ ರಾಜ್ ಹಣ ಎಗರಿಸಿದರು ಖದೀಮರು!

ನೆಲಮಂಗಲ: ನಟ ವಿನೋದ್ ರಾಜ್​ಗೆ ಸೇರಿದ ₹ 1 ಲಕ್ಷ ಹಣವನ್ನು ಹಾಡಹಗಲೇ ಕಳ್ಳತನ ಮಾಡಿರುವ ಘಟನೆ  ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ಪಟ್ಟಣದ ಇಂಡಸ್‌ ಲ್ಯಾಂಡ್ ಬ್ಯಾಂಕ್ ಮುಂಭಾಗ ನಟ ವಿನೋದ್ ರಾಜ್, ತಮ್ಮ ಕಾರಿನ ಜೊತೆ ನಿಂತಿದ್ದರು. ಆಗ ಸ್ಥಳಕ್ಕಾಗಮಿಸಿದ ಖದೀಮರು ಕಾರಿನ ಟೈರ್ ಪಂಚರ್ ಆಗಿದೆ ಎಂದು ವಿನೋದ್​ ರಾಜ್​ ಅವರ ಗಮನ ಬೇರೆಡೆ ಸೆಳೆದು, ಕಾರಿನಲ್ಲಿದ್ದ ₹ 1 ಲಕ್ಷ ಹಣವನ್ನು ಎಗರಿಸಿದ್ದಾರೆ. ಈ ಸಂಬಂಧ ನಟ ವಿನೋದ್ ರಾಜ್ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.