‘ಭೂಮಿ ಮೇಲೆ ಇನ್ನೆಂದೂ ಹೀಗಾಗದಿರಲಿ’- ನಟ ವಸಿಷ್ಠ ಕಂಬನಿ

ಶ್ರೀಲಂಕಾದಲ್ಲಿ ನಿನ್ನೆ ನಡೆದ ಸರಣಿ ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದಂತೆ ನಟ ವಸಿಷ್ಠ ಸಿಂಹ ಕಂಬನಿ ಮಿಡಿದಿದ್ದಾರೆ. ಘಟನೆ ಬಗ್ಗೆ ತೀವ್ರವಾಗಿ ನೊಂದು ಟ್ವೀಟ್ ಮಾಡಿರೋ ಅವರು, ‘ಇಂಥಾ ದಾಳಿಗಳು ಈ ಭೂಮಿ ಮೇಲೆ ಎಲ್ಲಿಯೂ, ಇನ್ನೆಂದಿಗೂ ಮರುಕಳಿಸಬಾರದು. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳೆಲ್ಲಾ ಒಂದಾಗಿ ಭಯೋತ್ಪಾದನೆ ಅನ್ನೋ ಭೂತದ ವಿರುದ್ಧ ಒಂದಾಗಬೇಕಿದೆ. ಭಯೋತ್ಪಾದನೆಯನ್ನ ಬುಡಸಮೇತ ಕಿತ್ತೊಗೆಯಬೇಕಿದೆ’ ಎಂದಿದ್ದಾರೆ.

ನಿನ್ನೆ, ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿತ್ತು. ದಾಳಿಯಲ್ಲಿ 6 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೇರಿದೆ. ಘಟನೆಯಲ್ಲಿ ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಎಂಬ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಮಾಹಿತಿ ನೀಡಿದ್ದಾರೆ. ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಪೊಲೀಸರು 24 ಜನರನ್ನು ಬಂಧಿಸಿದ್ದಾರೆ.