ಪ್ರಜಾಕೀಯಾ ಬೂದಿಮುಚ್ಚಿದ ಕೆಂಡ ಇದ್ದಂತೆ -ಉಪೇಂದ್ರ

ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಉತ್ತಮ ಪ್ರಜಾಕೀಯಾ ಪಕ್ಷದ ಸ್ಥಾಪಕ, ನಟ ಉಪೇಂದ್ರ ಭೇಟಿ ನೀಡಿ ತಾಯಿ ಮಾರಿಕಾಂಬೆ ಆಶೀರ್ವಾದ ಪಡೆದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಸುನೀಲ್ ಪವಾರ್ ಪರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಗೆಲುವು ಸೋಲು ಮುಖ್ಯ ಅಲ್ಲ. ನಮ್ಮ ವಿಚಾರ ಜನರಿಗೆ ಮುಟ್ಟಬೇಕು. ನಮ್ಮ ವಿಚಾರ ವಾದವನ್ನು ಜನ ಒಪ್ಪಿದರೆ ಖಂಡಿತಾ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು, ರಾಜಕೀಯದಲ್ಲಿ ನಿರೀಕ್ಷೆ, ಸ್ಟ್ರ್ಯಾಟಜಿ ಇರುತ್ತೆ. ಪ್ರಜಾಕೀಯಾದಲ್ಲಿ ಇವೆಲ್ಲ ಇರೋಲ್ಲ. ಪ್ರಜಾಕೀಯಾ ಬೂದಿಮುಚ್ಚಿದ ಕೆಂಡ ಇದ್ದಂತೆ. ಧಗ ಧಗ ಎಂದು ಉರಿಯೋಲ್ಲ. ಒಳಗೇ ಹಬ್ಬುತ್ತಿದೆ ಎಂದು ತಿಳಿಸಿದ್ರು. ಮಂಡ್ಯ ರಾಜಕೀಯ ಅಷ್ಟೇ ಎಲ್ಲ ಕಡೆ ಕಾಣ್ತಿದೆ. ಮತ್ತೆ ನಾನೂ ಅದರ ಬಗ್ಗೆ ಮಾತಾಡಲ್ಲ. ಇಲ್ಲಿ ಜನ ಗೆಲ್ಲಲಿ ಎಂದು ಸಿನಿಮಾ ಸ್ಟೈಲಲ್ಲಿ ಉತ್ತರಿಸಿದ್ರು. ಉಪೇಂದ್ರ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv