ಕೋಟಿಗಟ್ಟಲೆ ಗಳಿಸಿದವರು‌ ಮಾತ್ರ ಎಲೆಕ್ಷನ್ ನಿಲ್ಲುವಂಥ ಸ್ಥಿತಿ ಇದೆ: ಉಪೇಂದ್ರ

ರಾಯಚೂರು: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಒಂದು ಒಳ್ಳೆಯ ವಿಚಾರ ಇಟ್ಟುಕೊಂಡು ಕಣಕ್ಕೆ ಇಳಿಯುತ್ತೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ದಾರೆ. ರಾಯಚೂರಿನಲ್ಲಿ ಅಭ್ಯರ್ಥಿ ನಿರಂಜನ ನಾಯಕ್ ಪರ ಪ್ರಚಾರಕ್ಕೆ ಆಗಮಿಸಿ ಮಾತನಾಡಿದ ಅವರು, ರಾಯಚೂರು ಅಭ್ಯರ್ಥಿ ಓರ್ವ ಅಡ್ವಕೇಟ್. ಪ್ರಜಾಕೀಯದ ತತ್ವ ಸಿದ್ದಾಂತವನ್ನು ನೋಡಿ ಪಕ್ಷಕ್ಕೆ ಬಂದಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಎಂಎಲ್ಎ ಗಳಿಗೆ ಸಂಬಳ ಇದೆ ಅನ್ನೋದು ಬಹಳ ಜನಕ್ಕೆ ಗೊತ್ತಿಲ್ಲ. ಕೋಟಿ ಗಟ್ಟಲೆ ಗಳಿಸಿದವರು‌ ಮಾತ್ರ ಎಲೆಕ್ಷನ್ ನಿಲ್ಲುವಂಥ ಪರಿಸ್ಥಿತಿ ಇಡೀ ದೇಶದಲ್ಲಿ ಇದೆ. ಲೋಕಸಭೆ ಚುನಾವಣೆ ಎನ್ನುವುದು ಸಾಮಾನ್ಯವಾದುದ್ದು. ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಉಪೇಂದ್ರ ಹೇಳಿದ್ದಾರೆ.

ಪ್ರಣಾಳಿಕೆಗಳು ಅಥೆಂಟಿಕ್ಕಾಗಿ ನೀಡಬೇಕು ಬರಿ ಆಶ್ವಾಸನೆ ಆಗಬಾರದು. ಪ್ರಣಾಳಿಕೆಯಲ್ಲಿನ ಅಂಶಗಳು ಈಡೇರಿಸದಿದ್ದಲ್ಲಿ ಅಂಥವರನ್ನ ಕೆಳಗಿಳಿಸುವಂತೆ ಆಗಬೇಕು.ಮತದಾರರಲ್ಲಿ ನಂಬಿಕೆ ಎನ್ನುವುದು ಹೋಗುತ್ತಿದೆ. ವಿಭಿನ್ನ ಪ್ರಯತ್ನ ಮಾಡುವವರು ಇಲ್ಲದಂತಾಗಿದೆ. ಭ್ರಷ್ಟಾಚಾರ ಎನ್ನುವುದು ಜನತೆ ತೊಲಗಿಸಬೇಕು. ಆತ್ಮ ತೃಪ್ತಿಗಾಗಿ ಬದಲಾಗಬೇಕಿದೆ. ಇದೊಂದು ಸೈಲೆಂಟ್ ರೆವ್ಯುಲೇಷನ್, ಬದಲಾವಣೆ ಯುವಕರು ಬಯಸ್ತಿದಾರೆ. ಇಲ್ಲಿ ಉಪೇಂದ್ರನಿಗೆ ಬೆಂಬಲ ಸಿಗ್ತಿಲ್ಲ, ವಿಚಾರಕ್ಕೆ ಬೆಂಬಲ ಸಿಗ್ತಿದೆ. ಒಂದು ವೇಳೆ ಗೆದ್ದಲ್ಲಿ ಜನರ ಬೇಡಿಕೆಗಳನ್ನ ಈಡೆರಿಸುವ ಪಕ್ಷಕ್ಕೆ ಬೆಂಬಲ ನೀಡ್ತಿದ್ದೇವೆ ಎಂದ ನಟ ಉಪೇಂದ್ರ ಹೇಳಿದರು. ಹಿಂದೆ 5 ಜನಕ್ಕೆ ಟೀ ಕುಡಿಸಿ ಪ್ರಾರಂಭಿಸಿ ನಾಯಕರಾದವರು, ಇಂದು ₹ 50 ಕೋಟಿ ಖರ್ಚು ಮಾಡುವ ಮಟ್ಟಿಗೆ ಬಂದಿದೆ. ರಾಷ್ಟ್ರೀಯ ಪಕ್ಷಗಳ ಇಂದಿನ ಖರ್ಚು ವೆಚ್ಚ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಕುಟುಂಬ ರಾಜಕಾರಣಕ್ಕಿಂತ ಯೋಗ್ಯತೆ ಇರುವವರು ಯಾರಾದ್ರು ಸ್ಪರ್ಧಿಸಬಹುದು ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv