ಸುಮಲತಾ ಅತ್ತಿಗೆ ಇದ್ದಂಗೆ, ಅವ್ರಿಗೆ ಒಳ್ಳೆಯದಾಗಲಿ: ಉಪೇಂದ್ರ

ಕೊಪ್ಪಳ: ಸುಮಲತಾ, ಅಂಬರೀಶ್ ಅಣ್ಣವರ ಪತ್ನಿ. ಅವರು ನಮಗೆ ಅತ್ತಿಗೆ ಇದ್ದಂಗೆ. ಅವರಿಗೆ ಒಳ್ಳೆಯದಾಗಲಿ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ನಗರದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪೇಂದ್ರ, ನಾನು ರಾಜಕೀಯದ ಬಗ್ಗೆ ಮಾತನಾಡೋಕೆ ಬಂದಿಲ್ಲ. ಪ್ರಜೆಗಳ ಬಗ್ಗೆ ಮಾತನಾಡೋಕೆ ಬಂದಿರುವೆ. ನನಗೆ ರಾಜಕೀಯ ಬಗ್ಗೆ ಗೊತ್ತಿಲ್ಲ. ಬಳ್ಳಾರಿ ಹೊರೆತುಪಡಿಸಿ ನಮ್ಮ‌ ಪಕ್ಷದಿಂದ 27 ಅಭ್ಯರ್ಥಿಗಳನ್ನ ನಿಲ್ಲಿಸಿದ್ದೀನಿ. ಎಲ್ಲಾ ಕಡೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದೆ. ರಾಜಕೀಯ ಎನ್ನುವುದೇ ಒಂದು ಉತ್ತಮ ಸಮಾಜ ಸೇವೆ. ಇದೊಂದು ಬಂಡವಾಳ ಹಾಗೂ ಲಾಭ ಇಲ್ಲದ ಸೇವೆ. ಪ್ರಜೆಗಳ ದುಡ್ಡನ್ನು ಪ್ರಜೆಗಳ ಸಮಾಜದ ಅಭಿವೃದ್ಧಿಗೆ ಬಳಸುವಂತಹ ಸೇವೆ. ಆದರೆ ರಾಜಕೀಯ ಅನ್ನೋದೇ ಬದಲಾಗಿದೆ. 20 ವರ್ಷಗಳ ಹಿಂದೆಯೇ ನಾನು ರಾಜಕೀಯಕ್ಕೆ ಬರಬೇಕು ಅನ್ನೋ ಆಸೆಯಿತ್ತು.

ಅದ್ಕಾಗಿಯೇ ನಾನು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು. ನನಗೆ ಯಾವ ಪಕ್ಷವೂ ಬೆಸ್ಟ್ ಎಕ್ಸಾಂಪಲ್ ಅಲ್ಲ. ನಮಗೆ ನಾವೇ ಬೆಸ್ಟ್ ಎಕ್ಸಾಂಪಲ್. ಜನರೇ ಇರುವಂಥ ಒಂದು ಪ್ರಾದೇಶಿಕ ಪಕ್ಷ ಬೇಕು. ಜನರ ಜೊತೆ ಉತ್ತಮ ಸಂಬಂಧ ಇರುವಂತಹ ಪಕ್ಷ ಬೇಕು. ಜನರು ಬೇಸೆತ್ತಿದ್ದಾರೆ, ಜನರೊಂದಿಗೆ ಉತ್ತಮ‌ ಒಡನಾಟ ಇರುವ ಪಕ್ಷ ಬೇಕು. ಎಲ್ಲರೂ ಹಣಕ್ಕೆ, ಸಾರಾಯಿಗೆ ಮಾರಾಟವಾಗಿಲ್ಲ. ಮಾರಾಟವಾಗಿದ್ರೆ 30% ಮತದಾನ ಯಾಕೆ ಆಗುತ್ತೆ. ನೂರಕ್ಕೆ ನೂರರಷ್ಟು ಮತದಾನ ಆಗಬೇಕಿತ್ತು. ರಾಜಕೀಯ ವ್ಯವಸ್ಥೆಯಿಂದ ಜನರಿಗೆ ಅಸೂಯೆ ಹುಟ್ಟಿದೆ. ಅದಕ್ಕಾಗಿ ಏನು ಇಲ್ಲ ಅನ್ನೋದೇ ನಮ್ಮ‌ ಪಕ್ಷದ ಪ್ರಣಾಳಿಕೆ. ಜನರೇ ತೀರ್ಮಾನ ಮಾಡಬೇಕು ಏನು ಬೇಕು ಅಂತಾ. ನಾವು ಅದು ಕೊಡ್ತೀವಿ, ಇದು ಕೊಡ್ತೀವಿ ಅಂತಾ ಹೇಳೋದಿಲ್ಲ. ಜನರು ಬುದ್ಧಿವಂತರು, ಸತ್ಯಕ್ಕಿಂತ ದೊಡ್ಡ ಬುದ್ಧಿವಂತರು ಯಾರೂ ಇಲ್ಲ. ಜನರು ಸತ್ಯವನ್ನು ಪರಿಶೀಲನೆ ಮಾಡುವಷ್ಟು ಬುದ್ಧಿವಂತರು. ನನಗೆ ಜನರು ಗೆಲ್ಲಬೇಕು, ಅದಕ್ಕಾಗಿ ಜನರಿಗಾಗಿ ಪಕ್ಷ ಕಟ್ಟಿದ್ದು. ಸಂವಿಧಾನವನ್ನು ಬದಲಾಯಿಸುವಷ್ಟು ದೊಡ್ಡವನು ನಾನಲ್ಲ. ಜನರಿಗೆ ಏನು ಬೇಕು ಅದನ್ನು ಕೊಡುವುದೇ ಅಷ್ಟೇ. ಎಲ್ಲೋ ಒಂದು ಕಡೆ ನನಗೆ ಆಶಾ ಭಾವನೆ ಇದೆ. ಅಲ್ಪ ಮಟ್ಟಿಗೆ ನಾವು ಗೆಲವು ಸಾಧಿಸಿದ್ದೀವೆ ಅಂತಾ ಎಂದು ಉಪೇಂದ್ರ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv