ಬಿಜೆಪಿ ಸೇರಿದ ಬಾಲಿವುಡ್ ಸ್ಟಾರ್ ಸನ್ನಿ ಡಿಯೋಲ್..!

ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾರನ್ನ ಭೇಟಿಯಾಗಿದ್ದ ನಟ ಸನ್ನಿ ಡಿಯೋಲ್ ಇಂದು ಕಮಲ ಪಾಳಯ ಸೇರಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಪಿಯೂಶ್​ ಗೋಯಲ್​ ಅವರ ನೇತೃತ್ವದಲ್ಲಿ ಸನ್ನಿ ಡಿಯೋಲ್ ಪಕ್ಷ ಸೇರ್ಪಡೆಗೊಂಡರು. ಇದೇ ವೇಳೆ ಮಾತನಾಡಿದ ಅವರು, ನಾನು ನನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತೇನೆ ಎಂದರು. ಅಲ್ಲದೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ರು. ನನ್ನ ತಂದೆ ಅಟಲ್​​ ಬಿಹಾರಿ ವಾಜಪೇಯಿ ಅವರನ್ನು ಬೆಂಬಲಿಸಿ ಅವರ ಜೊತೆ ಕೆಲಸ ಮಾಡಿದ್ದರು, ನಾನು ಈಗ ಮೋದಿ ಅವರನ್ನು ಬೆಂಬಲಿಸಿ ಅವರೊಂದಿಗೆ ಕೆಲಸ ಮಾಡಲು ಬಂದಿದ್ದೇನೆ. ನನ್ನ ಕೆಲಸವೇ ಮಾತನಾಡಲಿದೆ ಅಂತ ಸನ್ನಿ ಹೇಳಿದ್ರು.

ಪಂಜಾಬ್​​ನ ಗುರ್ದಾಸ್​​ಪುರ್​ ಕ್ಷೇತ್ರದಿಂದ ಸನ್ನಿ ಡಿಯೋಲ್​​ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. ಬಿಜೆಪಿ ಶಿರೋಮಣಿ ಅಕಾಲಿ ದಳ್​​​ ಪಕ್ಷೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್​ನ ಅಮೃತ್​​ಸರ್​, ಗುರ್ದಾಸ್​​ಪುರ್​ ಹಾಗೂ ಹೋಶಿಯಾರ್​​ಪುರ್​​ನ 13 ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದೆ.

ಗುರ್ದಾಸ್​​ಪುರ್​​, ದಿವಂಗತ ನಟ ವಿನೋದ್​ ಖನ್ನಾ ಅವರು ಪ್ರತಿನಿಧಿಸಿದ್ದ ಕ್ಷೇತ್ರವಾಗಿತ್ತು. 2017ರಲ್ಲಿ ಅವರು ಮರಣ ಹೊಂದಿದ ನಂತರ ಬಿಜೆಪಿ, ಖನ್ನಾ ಅವರ ಪತ್ನಿ ಕವಿತಾ ಅಥವಾ ಮಗ ಅಕ್ಷಯೇ ಖನ್ನಾ ಅವರನ್ನ ಕಣಕ್ಕಿಳಿಸಲಿದೆ ಎಂಬ ವದಂತಿ ಹಬ್ಬಿತ್ತು.

62 ವರ್ಷ ವಯಸ್ಸಿನ ಸನ್ನಿ ಡಿಯೋಲ್, ಘಾಯಲ್, ಗದಾರ್​ ಎಕ್​​ ಪ್ರೇಮ್ ಕಥಾ, ಧಾಮಿನಿ ಹಾಗೂ ಬಾರ್ಡರ್​ ನಂತಹ ಸಿನಿಮಾಗಳ ಮೂಲಕ ಫೇಮಸ್​.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv