ನಮಗಿಂತ ಅವರ ಚಿತ್ರ ಚೆನ್ನಾಗಿ ಬರಲಿ, ಅವರಿಗೇ ಹಣ ಚೆನ್ನಾಗಿ ಆಗಲಿ-ಸುದೀಪ್

ದಾವಣಗೆರೆ: ಹರಿಹರ ತಾಲೂಕಿನ ರಾಜನಳ್ಳಿ ಗ್ರಾಮದಲ್ಲಿ ಇರುವ ವಾಲ್ಮೀಕಿ ಗುರುಪೀಠಕ್ಕೆ ನಟ ಕಿಚ್ಚ ಸುದೀಪ್​ ಭೇಟಿ ನೀಡಿ ವಾಲ್ಮೀಕಿ ಗದ್ದುಗೆಯ ದರ್ಶನ ಪಡೆದರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಇತ್ತೀಚಿಗೆ ವೀರ ಮದಕರಿ ಚಿತ್ರದಲ್ಲಿ ನಾಯಕ ಸಮುದಾಯದ ಸುದೀಪ್​ ಬಿಟ್ಟು, ಬೇರೆ ಸಮುದಾಯದವರು ನಟಿಸುವುದಕ್ಕೆ ತಮ್ಮ ವಿರೋಧವಿದೆ ಅಂತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣ ದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಹಾಗೂ ಸ್ವಾಮೀಜಿ‌ ಮಾತುಕತೆ ಮಹತ್ವ ಪಡೆದಿದೆ.

ಇನ್ನು  ಮಾತುಕತೆ ನಂತರ ವೀರ ಮದಕರಿ ಸಿನಿಮಾದ ಬಗ್ಗೆ ಎದ್ದಿರುವ ಚರ್ಚೆ ಕುರಿತು ಮಾತನಾಡಿದ ಸುದೀಪ್ ಮದಕರಿ ಸಿನಿಮಾ ನಾನು ಮಾಡ್ತೇನೆ ಅವರೂ ಮಾಡಲಿ. ಅವರದು ಜನವರಿಯಲ್ಲಿ ಶೂಟಿಂಗ್​ ಲಾಂಚ್ ಆಗುತ್ತೆ. ನಮ್ಮದು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಿನಿಮಾ ಲಾಂಚ್ ಆಗಬಹುದು. ಸಿನಿಮಾ‌ನ್ನ, ಸಿನಿಮಾಥರ ನೋಡಿ. ನಾನು ಸಿನಿಮಾ ಮಾಡ್ತೇನೆ, ಅವರೂ ಮಾಡಲಿ. ವಾರಿಯರ್ ಒಬ್ಬರ ಚಿತ್ರ ಮಾಡುತ್ತಿದ್ದಾರೆ, ನಮಗಿಂತ ಅವರ ಚಿತ್ರ ಚೆನ್ನಾಗಿ ಬರಲಿ. ಅವರಿಗೇ ಹಣ ಚೆನ್ನಾಗಿ ಆಗಲಿ. ಆದ್ರೆ ನಾನು ಕೂಡ ಮದಕರಿ ನಾಯಕ ಕುರಿತು ಸಿನಿಮಾ ಮಾಡ್ತಾನೆ. ನಾನು ಎರಡು ಮೂರು ವರ್ಷದಿಂದ ಅಧ್ಯಯನ ಮಾಡಿದ್ದೇನೆ. ಸ್ಕ್ರಿಪ್ಟ್ ಕೂಡ ಮಾಡಲಾಗಿದೆ. ಹಾಗಾಗೀ ನಾನು ಸಿನಿಮಾ ಮಡುತ್ತೇನೆ ಎಂದು ಅನೌಸ್ ಮಾಡಿದ್ದೆ.‌ ದುರ್ಗದ ಹುಲಿ ಟೈಟಲ್ ವಿವಾದವಾಗಿದೆ ಅವರು ತೆಗೆದುಕೊಂಡು ಉಳಿದ ಟೈಟಲ್ ಬಿಟ್ಟರೆ ನಾನು ತೆಗೆದು ಕೊಳ್ಳುತ್ತೇನೆ ಎಂದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: firstnews.tv