ಚಿತ್ರೀಕರಣಕ್ಕೆ ಬ್ರೇಕ್​ ನೀಡಿ, ಮತ ಹಾಕಿದ ರೋರಿಂಗ್​ ಸ್ಟಾರ್​ ಶ್ರೀ ಮುರುಳಿ

ಬೆಂಗಳೂರು: ರೋರಿಂಗ್​ ಸ್ಟಾರ್​ ಶ್ರೀ ಮುರುಳಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಇಂದು ಬೆಂ. ಸೆಂಟ್ರಲ್​ ಲೋಕಸಭಾ ಕ್ಷೇತ್ರದ ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜ್​ಗೆ ಆಗಮಿಸಿ ಮತದಾನ ಮಾಡಿದ್ರು. ಶ್ರೀ ಮುರುಳಿ ಜೊತೆ ಅವರ ತಂದೆ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ್ರು, ತಾಯಿ ಹಾಗೂ ಪತ್ನಿ ಕೂಡಾ ಆಗಮಿಸಿದ್ರು. ವಿಶೇಷ ಅಂದ್ರೆ ಶ್ರೀ ಮುರಳಿ ಮತದಾನಕ್ಕೆಂದೇ ಮೈಸೂರಿನಲ್ಲಿ ನಡೆಯುತ್ತಿದ್ದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್​ ನೀಡಿ, ಇಲ್ಲಿಗೆ ಬಂದು ಮತ ಹಾಕಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv