ಮನೆಯಲ್ಲಿ ಮಲಗಿದ್ರೆ ದಯವಿಟ್ಚು ಎದ್ದು ಬಂದು ವೋಟ್ ಮಾಡಿ: ಶಿವಣ್ಣ ಮನವಿ

ಬೆಂಗಳೂರು: ಹ್ಯಾಟ್ರಿಕ್​ ಹೀರೊ ಶಿವರಾಜ್ ಕುಮಾರ್ ಮತ ಚಲಾಯಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ರು. ಬಳಿಕ  ಮಾತನಾಡಿದ ಅವರು, ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯ ಮತ್ತು ಹಕ್ಕು. ನಾನು ಇವತ್ತು ವೋಟ್ ಮಾಡಿದ್ದೀನಿ, ನೀವೂ ಮಾಡಿ. ಅವರು ಏನ್ ಮಾಡಿದ್ದಾರೆ, ಇವರು ಏನ್ ಮಾಡಿದ್ದಾರೆ ಅನ್ನೋದಕ್ಕಿಂತ ಮೊದಲು ನಿಮ್ಮ ಕರ್ತವ್ಯ ನೀವು ಮಾಡಿ. ನಿಮ್ಮ ಪ್ರತಿನಿಧಿಗಳು ಕೊಟ್ಟ ಭರವಸೆಗಳನ್ನ ಉಳಿಸಿಕೊಂಡಿಲ್ಲ, ಅದನ್ನ ಪ್ರಶ್ನೆ ಮಾಡಿ. ಅವರನ್ನ ಸುಮ್ಮನೆ ಬಿಡಬೇಡಿ, ಪ್ರಶ್ನೆ ಮಾಡಿ, ಅದು ನಿಮ್ಮ ಹಕ್ಕು. ಅದು ಬಿಟ್ಟು ಯಾರೂ ಏನೂ ಮಾಡ್ತಿಲ್ಲ ಅಂತಾ ನೀವೂ ಸುಮ್ಮನೆ ಕೂರೋದು ತಪ್ಪು. ಮನೆಯಲ್ಲಿ ಸುಮ್ಮನೆ ಮಲಗಿದ್ರೆ, ದಯವಿಟ್ಚು ಎದ್ದು ಬಂದು ವೋಟ್ ಮಾಡಿ ಅಂತಾ ಮನವಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv