ನೀವು ಬದುಕಿದ್ದೀರಾ ಅಂತಾ ತೋರಿಸೋದಕ್ಕಾದ್ರೂ ವೋಟ್ ಮಾಡಿ -ರವಿಚಂದ್ರನ್

ಬೆಂಗಳೂರು: ಬೆಂ. ಉತ್ತರ ಲೋಕಸಭಾ ಕ್ಷೇತ್ರದ ರಾಜಾಜಿನಗರದ ಬೂತ್‌ ನಂಬರ್ 154ರಲ್ಲಿ‌ ನಟ ರವಿಚಂದ್ರನ್ ಕುಟುಂಬಸ್ಥರ ಸಮೇತ ಆಗಮಿಸಿ ಮತ ಚಲಾಯಿಸಿದ್ದಾರೆ. ಪುತ್ರ ಮನೋರಂಜನ್ ಹಾಗೂ ಪುತ್ರಿ ಐಡಿ ಕಾರ್ಡ್ ಬಿಟ್ಟು ಬಂದ ಹಿನ್ನೆಲೆ ಕಾರ್ಡ್ ತರಲು ಮನೆಗೆ ತೆರಳಿದರು. ಬಳಿಕ ಮತದಾನದ ಹಕ್ಕನ್ನು ಚಲಾಯಿಸಿದ್ರು. ಬಳಿಕ ಮಾತನಾಡಿದ ನಟ ರವಿಚಂದ್ರನ್​, ನೀವು ಬದುಕಿದ್ದೀರಾ ಅಂತಾ ತೋರಿಸೋದಕ್ಕಾದ್ರೂ ವೋಟ್ ಮಾಡಿ. ಇನ್ನೂ ಸಾಕಷ್ಟು ಸಮಯ ಇದೆ. ಎಲ್ರೂ ಬಂದು ವೋಟ್ ಮಾಡಿ. ಎಲ್ಲರೂ ವೋಟ್ ಮಾಡಿದ್ರೆ, ದೇಶ ಉತ್ತಮವಾಗಿ‌ ಮುಂದುವರಿಯುತ್ತೆ ಅಂತಾ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv