ಇಂದು ಕನ್ನಡಿಗರ ರಾಜಕುಮಾರನ ಜನ್ಮೋತ್ಸವ

ಬೆಂಗಳೂರು: ಕನ್ನಡ ಕಂಠೀರವ, ನಟಸಾರ್ವಭೌಮ, ಪದ್ಮಶ್ರೀ ಪುರಸ್ಕೃತ ಡಾ.ರಾಜ್ ಕುಮಾರ್​ಗೆ ಇಂದು 90ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜ್​ಕುಮಾರ್​ ಫ್ಯಾಮಿಲಿ ಪ್ರತಿ ವರ್ಷದಂತೆ ಇಂದೂ ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ ಸ್ಮಾರಕದ ಬಳಿ ಬಂದು ರಾಜ್​ ಸಮಾಧಿಗೆ ನಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು, ಅಭಿಮಾನಿಗಳು ಪ್ರತಿ ಈ ಬಾರಿಯಂತೆ ಈ ಬಾರಿಯೂ ರಾಜ್ ಹುಟ್ಟುಹಬ್ಬದ ಅಂಗವಾಗಿ ವಿಶೇಷ ರಕ್ತದಾನ, ನೇತ್ರದಾನ ಶಿಬಿರ ಹಾಗೂ ಅನ್ನದಾನ  ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv