ವೋಟ್ ಮಾಡಿದ ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಟಿ ರಾಧಿಕಾ ಪಂಡಿತ್​ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕುಟುಂಬಸ್ಥರೊಂದಿಗೆ ಮಲ್ಲೇಶ್ವರಂನ ದೇವಯ್ಯ ಪಾರ್ಕ್ ಬಳಿಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ರು. ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಸಿದ್ರು. ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಭೈರೇಗೌಡ ಸೇರಿದಂತೆ ಪಕ್ಷೇತರರು ಅಖಾಡದಲ್ಲಿದ್ದಾರೆ.

ಇನ್ನು, ನಟಿ ರಾಗಿಣಿ ದ್ವಿವೇದಿ ಕೂಡಾ ಮತದಾನ ಮಾಡಿದ್ದಾರೆ. ನಗರದ ಬಿಳೇಕಹಳ್ಳಿಯಲ್ಲಿರುವ ದಿಲೀಪ್ ನರ್ಸರಿ ಪ್ರೈಮರಿ & ಇಂಗ್ಲೀಷ್ ಸ್ಕೂಲ್​ಗೆ ತಂದೆ ರಾಕೇಶ್ ಕುಮಾರ್ ದ್ವಿವೇದಿ ಅವರೊಂದಿಗೆ ಆಗಮಿಸಿ ವೋಟ್​ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv