ಯೋಧ ಗುರು ಅಂತ್ಯಕ್ರಿಯೆ ವೇಳೆ ಅವಾಚ್ಯ ಶಬ್ದ ಬಳಸಿ ಪ್ರಕಾಶ್ ರೈರನ್ನ ತಳ್ಳಿದ ಜನ

ಮಂಡ್ಯ: ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಗುಡಿಗೇರಿ ವೀರಯೋಧ ಗುರು ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ನಟ ಪ್ರಕಾಶ್​ ರೈರನ್ನು ನೆರೆದಿದ್ದ ಜನ ತಳ್ಳಾಡಿದ ಘಟನೆ ನಡೆಯಿತು. ಯೋಧನ ಅಂತ್ಯ ಸಂಸ್ಕಾರದ ಸ್ಥಳದ ಬಳಿ‌ ಪ್ರಕಾಶ್​ ರೈ ನಿಂತಿದ್ದರು. ಈ ವೇಳೆ ಕೆಲವರು ದೇಶ ದ್ರೋಹಿ ನೀನೇಕೆ ಇಲ್ಲಿಗೆ ಬಂದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಕಾಶ್​ ರೈ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪ್ರಕಾಶ್​ ರೈ ಕುಸಿದು ಬಿದ್ದಿದ್ದಾರೆ. ನಂತರ ಅವರ ರಕ್ಷಣೆಗೆ ಪೊಲೀಸರು ಧಾವಿಸಿ, ಪರಿಸ್ಥಿತಿಯನ್ನ ಹತೋಟಿಗೆ ತಂದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv