ಹಲ್ಲೆ & ಮೋದಿ ಭಜನೆಯಿಂದ ಬಿಜೆಪಿ ಬಣ್ಣ ಬಯಲು: ಪ್ರಕಾಶ್​ ರೈ

ಮಂಡ್ಯ: ವೀರಯೋಧ ಗುರು ಅಂತ್ಯಕ್ರಿಯೆ ವೇಳೆ ಬಿಜೆಪಿ ಬಣ್ಣ ಬಯಲಾಗಿದೆ ಎಂದು ನಟ ಪ್ರಕಾಶ್​​ ರೈ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗುಡಿಗೆರೆಯಲ್ಲಿ ನಿನ್ನೆ ಯೋಧ ಗುರು ಅಂತ್ಯಕ್ರಿಯೆ ಮುಗಿಸಿ ಪ್ರಕಾಶ್​ ರೈ ವಾಪಸ್ಸಾಗುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ತಡೆದು, ದೇಶದ್ರೋಹಿ ನೀನೇಕೆ ಇಲ್ಲಿಗೆ ಬಂದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಕಾಶ್​ ರೈ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪ್ರಕಾಶ್​ ರೈ ಕುಸಿದು ಬಿದ್ದಿದ್ದರು. ನಂತರ ಅವರ ರಕ್ಷಣೆಗೆ ಪೊಲೀಸರು ಧಾವಿಸಿ, ಪರಿಸ್ಥಿತಿಯನ್ನ ಹತೋಟಿಗೆ ತೆಗೆದುಕೊಂಡಿದ್ದರು. ಘಟನೆ ನಂತ್ರ ಟ್ವೀಟ್​ ಮಾಡಿರುವ ಪ್ರಕಾಶ್​ ರೈ, ನನ್ನ ಮೇಲೆ ಬಿಜೆಪಿಯವರು ಮಾಡಿದ ಹಲ್ಲೆ, ಮೋದಿ ಭಜನೆ ನಿಮ್ಮ ಬಣ್ಣ ಬಯಲು ಮಾಡಿದೆ. ಟೆರೆರಿಸ್ಟ್​ ಆನ್​ ಡೆಮಾಕ್ರಸಿ ಎಂದು ಹ್ಯಾಶ್​ ​ಟ್ಯಾಗ್​ ಹಾಕಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಯೋಧ ಗುರು ಅಂತ್ಯಕ್ರಿಯೆ ವೇಳೆ ಅವಾಚ್ಯ ಶಬ್ದ ಬಳಸಿ ಪ್ರಕಾಶ್ ರೈರನ್ನ ತಳ್ಳಿದ ಜನ


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv