ಮತದಾನ ಮಾಡಿ ಉತ್ತಮ ನಾಗರಿಕರಾಗಿ: ಮಂಡ್ಯ ರಮೇಶ್

ಮೈಸೂರು: ನಟ ಮಂಡ್ಯ ರಮೇಶ್ ಇಂದು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಗೋಕುಲ ಶಾಲೆಯಲ್ಲಿ ಮಂಡ್ಯ ರಮೇಶ್ ಪತ್ನಿ ಜೊತೆ ಬಂದು ಮತದಾನ ಮಾಡಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮಂಡ್ಯ ರಮೇಶ್, ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡಿ ಉತ್ತಮ ನಾಗರಿಕರಾಗಿ. ಚುನಾವಣೆ ಅನ್ನೋದು ಪ್ರಜಾಪ್ರಭುತ್ವದ ಹಬ್ಬ ಎಂದರು. ನಾನು ಎಲ್ಲೇ ಇದ್ರೂ ಯಾವುದೇ ಚುನಾವಣೆಯನ್ನ ಮಿಸ್ ಮಾಡಿಕೊಂಡಿಲ್ಲ. 21 ನೇ ವಯಸ್ಸಿನಲ್ಲಿ ನಾನು ಮತದಾನ ಮಾಡಿದ್ದೆ. ಎಲ್ಲರೂ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv