ಟ್ವಿಟರ್‌ನಲ್ಲಿ ರಜನಿಯನ್ನ ಅನ್‌ಫಾಲೋ ಮಾಡಿದ್ದೀನಿ- ನಟ ಜಗ್ಗೇಶ್​

ಮೈಸೂರು: ರಜನಿಕಾಂತ್ ಅವರನ್ನು ರಾಜ್‌ಕುಮಾರ್‌ ಅವರಂತೆ ಗೌರವಿಸಿದ್ದೆ. ಆದರೆ ಅವರ ಹೇಳಿಕೆಯ ನಂತರ ಟ್ವಿಟರ್‌ನಲ್ಲೂ ಅವರನ್ನು ಅನ್‌ಫಾಲೋ ಮಾಡಿದ್ದೀನಿ ಎಂದು ನಟ ಜಗ್ಗೇಶ್ ರಜನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲೂ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅವ್ರು, ರಜನಿಕಾಂತ್ ತಮ್ಮ ರಾಜಕೀಯ ಲಾಭಕ್ಕೋಸ್ಕರ ಕಾವೇರಿ ಬಗ್ಗೆ ಮಾತನಾಡಿದ್ದಾರೆ. ಒಂದು ಮನೆಯಲ್ಲಿರುವ 5 ಮಂದಿಯು ಒಂದೇ ರೀತಿ ಇರಲ್ಲ. ಅಂದ ಮೇಲೆ ಎಲ್ಲರೂ ನಮ್ಮಂತೆ ಯೋಚನೆ ಮಾಡಬೇಕು ಅನ್ನುವುದು ಸರಿಯಲ್ಲ. ಚಿತ್ರ ಬಿಡುಗಡೆ ಮಾಡಿದ್ರೂ ಕಷ್ಟ, ಮಾಡದೇ ಇದ್ರು ಕಷ್ಟ ಎನ್ನುವ ಪರಿಸ್ಥಿತಿ ಬಂದಿದೆ. ನಾನಂತೂ ಕಾಲಾ ಚಿತ್ರವನ್ನು ನೋಡುವುದಿಲ್ಲ. ನನ್ನ ಅಭಿಮಾನಿಗಳಿಗೂ ನನ್ನ ಗುಣವೇ ಇರಲಿದೆ. ಕಾಲಾ ಚಿತ್ರವನ್ನು ನೋಡದೇ ಕನ್ನಡಿಗರು ವಿನೂತನವಾಗಿ ಪ್ರತಿಭಟನೆ ಮಾಡಬಹುದು ಅಂತ ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv