ಜಗ್ಗೇಶ್​ ಕಾರು ಎಗರಿಸಿದ್ರು ನಟ ಶಶಿಕುಮಾರ್​..!

ನವರಸ ನಾಯಕ ಜಗ್ಗೇಶ್ ಪ್ರೀಮಿಯರ್ ಪದ್ಮಿನಿಯನ್ನ ನಾಳೆ ಬೆಳ್ಳಿತೆರೆಗೆ ತರಲು ಸಜ್ಜಾಗಿದ್ದಾರೆ. ಅರ್ಥಾತ್‌ ಅವರ ನಟನೆಯ ಪ್ರೀಮಿಯರ್ ಪದ್ಮಿನಿ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಕಾಣ್ತಿದೆ. ಈ ಹಿನ್ನೆಲೆಯಲ್ಲಿ ಫಸ್ಟ್‌ನ್ಯೂಸ್ ಜೊತೆ ನಟ ಜಗ್ಗೇಶ್ ತಮ್ಮ ಬದುಕಿನ ಪಯಣದಲ್ಲಿನ ಕಾರಿನ ಚಾಪ್ಟರ್‌ ಬಗ್ಗೆ ಮಾತನಾಡಿದ್ರು. ವಿಶೇಷ ಅಂದ್ರೆ, ಜಗ್ಗೇಶ್‌ ಕೂಡ ತುಂಬಾ ಆಸೆಯಿಂದ ಖರೀದಿಸಿದ್ದ ಕಾರು ಪ್ರೀಮಿಯರ್ ಪದ್ಮಿನಿ. ಬಳಿಕ ಮಾರುತಿ 800 ಕೂಡ ಖರೀದಿಸುತ್ತಾರೆ. ಆ ಸಮಯದಲ್ಲಿ ನಡೆದ ಅಪರೂಪದ ಘಟನೆಯನ್ನ ಮೆಲುಕು ಹಾಕಿದ್ದಾರೆ ಜಗ್ಗೇಶ್.

2 ದಿನ ಹೊಸ ಕಾರು ನಾಪತ್ತೆ..!
ಪ್ರೀಮಿಯರ್‌ ಪದ್ಮಿನಿ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಕಾಕತಾಳೀಯ ಅಂದ್ರೆ, ಜಗ್ಗೇಶ್‌ ತಮ್ಮ ಬದುಕಿನಲ್ಲಿ ಖರೀದಿಸಿದ ಮೊದಲ ಕಾರು ಕೂಡ ಪ್ರೀಮಿಯರ್ ಪದ್ಮಿನಿ. 27 ಸಾವಿರಕ್ಕೆ ಅಂದು ಜಗ್ಗೇಶ್‌ ಕಾರು ಖರೀದಿಸಿದ್ದರು. ಒಮ್ಮೆ ಜಗ್ಗೇಶ್ ಅವ್ರು ತಮ್ಮ ಪ್ರೀಮಿಯರ್ ಕಾರಲ್ಲಿ ಸಂಗೀತ ನಿರ್ದೇಶಕರಾದ ಹಂಸಲೇಖ ಅವರನ್ನ ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಹೋಗಬೇಕಾದ ಪ್ರಸಂಗ ಎದುರಾಗಿತ್ತು. ಆಗ ಹಂಸಲೇಖ ಅವರು ಕಾರ್‌ನಲ್ಲಿ ಕೂತವ್ರೇ ಯಾವುದೋ ಡಬ್ಬ ಕಾರ್ ಇದು ಅಂದುಬಿಟ್ರಂತೆ. ಆಗ ಜಗ್ಗೇಶ್ ಅವರು ಹೊಸ ಕಾರು ಖರೀದಿಸಲು ಡಿಸೈಡ್ ಮಾಡ್ತಾರೆ. ಅವರು ಮಾಡಿದ ಮಾಡಿದ ಪ್ಲಾನ್ ಏನು? ಶಶಿಕುಮಾರ್ 2 ದಿನ ಹೊಸ ಕಾರನ್ನ ಹೇಗೆ ಎಗರಿಸಿದ್ರು? ಅನ್ನೋದನ್ನ ನವರಸ ನಾಯಕ ಜಗ್ಗೇಶ್ ಅವರಿಂದಲೇ ಕೇಳಿದ್ರೇನೇ ಚೆಂದ. ಈ ವಿಡಿಯೋದಲ್ಲಿ ಆ ಹಾಸ್ಯಮಯ ಪ್ರಸಂಗವನ್ನ ಜಗ್ಗೇಶ್‌ ವಿವರಿಸಿದ್ದಾರೆ ನೋಡಿ.