ಗಣಿ ‘ಕನ್ನಡಕ’ದಲ್ಲಿ ಬಾಲಿವುಡ್‌-ಸ್ಯಾಂಡಲ್‌ವುಡ್‌ ಸಮಾಗಮ!

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಬಾಲಿವುಡ್ ತಾರೆ ಪತ್ರಲೇಖಾ ಕಾಂಬಿನೇಷನ್​​ನಲ್ಲಿ ’ವೇರ್ ಇಸ್​ ಮೈ ಕನ್ನಡಕ ’ ಅನ್ನೋ ಭರ್ಜರಿ ಸಿನಿಮಾವೊಂದು ಸೆಟ್ಟೇರಿದೆ. ಕನ್ನಡ ಸಿನಿಮಾವೊಂದರಲ್ಲಿ ಇದೇ ಮೊದಲ ಬಾರಿಗೆ ಸಲ್ಮಾನ್ ಸಹೋದರ ಅರ್ಬಾಜ್‌ ಖಾನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇನ್ನು ಮನಾಲಿ ಚಳಿಯಲ್ಲಿ ’ಗೀತಾ’ ಜೊತೆ ಡ್ಯೂಯೆಟ್ ಹಾಡ್ತಿದ್ದ ಗಣಿ ಇದೀಗ ಪತ್ರಲೇಖಾ ಜೊತೆ ಕಮಾಲ್​ ಮಾಡೋಕೆ ರೆಡಿಯಾಗಿದ್ದಾರೆ. ಮೊನ್ನೆ ನಗರದ ಪಂಚಮುಖಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಿತು.

ವಿಶೇಷ ಪಾತ್ರದಲ್ಲಿ ಅರ್ಬಾಸ್ ಖಾನ್ ಕಮಾಲ್..!
ವಿಶೇಷ ಅಂದ್ರೆ, ವೇರ್​ ಇಸ್ ಮೈ ಕನ್ನಡಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿರೋದು ಬಾಲಿವುಡ್‌ನ ರಾಜ್‌ ಹಾಗೂ ಧಾಮಿನಿ ಜೋಡಿ. ಕೆಲ ಸಿನಿಮಾ ಹಾಗೂ ಸೀರಿಯಲ್‌ ನಿರ್ದೇಶಿಸಿರೋ ಈ ಜೋಡಿ, ಈಗ ಕನ್ನಡದಲ್ಲೂ ಅದೃಷ್ಟ ಪರೀಕ್ಷೆಗಿಳಿದಿದೆ. ಕನ್ನಡ ಸಿನಿಮಾ ಮಾರುಕಟ್ಟೆ ವ್ಯಾಪ್ತಿ ವಿಸ್ತಾರ ಆಗಿರೋದ್ರಿಂದ ಬಹಳ ಖುಷಿಯಲ್ಲಿರೋ ಈ ಜೋಡಿ, ಕನ್ನಡ ಹಾಗೂ ಹಿಂದಿಯಲ್ಲಿನ ಕಲಾವಿದರನ್ನ ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಇದೊಂದು ಆಕ್ಷನ್ ಕಂ ಕಾಮಿಡಿ ಸಿನಿಮಾವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಿಂದ ಲಂಡನ್, ಇಂಗ್ಲೆಂಡ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚಿತ್ರದ ಶೂಟಿಂಗ್ ನಡೆಸೋಕೆ ತಯಾರಿ ನಡೆಸಿದೆ. ಸದ್ಯಕ್ಕೆ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಈ ಸಿನಿಮಾ ನಂತರ ಇದೇ ಸ್ಟಾರ್​ ಜೋಡಿ ಡೈರೆಕ್ಟರ್​​ ಹಿಂದಿ ಭಾಷೆಯಲ್ಲಿ ’ಶೂಟ್ ದಿ ಬೂತ್‘ ಚಿತ್ರ ನಿರ್ದೇಶನ ಮಾಡಲಿದೆಯಂತೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್‌ ಖಾನ್‌ ನಟಿಸುತ್ತಿದ್ದು, ಮತ್ತ್ಯಾರೆಲ್ಲಾ ಈ ಟೀಮ್ ಜಾಯಿನ್ ಆಗ್ತಾರೋ ಕಾದು ನೋಡಬೇಕಿದೆ.