ಶ್ರೀಲಂಕಾ ಸರಣಿ ಸ್ಫೋಟ; ಗಣೇಶ್ ಸ್ನೇಹಿತರಿಬ್ಬರ ದುರ್ಮರಣ

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಸ್ಫೋಟದಿಂದ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದವರು ಕೂಡಾ ಸಾವನ್ನಪ್ಪಿದ್ರು. ಇದರಲ್ಲಿ ನಟ, ಗೋಲ್ಡನ್​ ಸ್ಟಾರ್​ ಗಣೇಶ್​ ಸ್ನೇಹಿತರಿಬ್ಬರು ಮೃತರಾಗಿದ್ದಾರೆ. ಈ ಸಂಬಂಧ ಗಣೇಶ್​ ಟ್ವೀಟ್​ ಮಾಡಿ ಸ್ನೇಹಿತರಿಗೆ ಸಂತಾಪ ಸೂಚಿಸಿದ್ದಾರೆ. ಇನ್ನು ಮುಂದೆ ನೀವು ನಮ್ಮೊಟ್ಟಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಈ ದುಃಖವನ್ನು ಹೇಳಿಕೊಳ್ಳಲು ನನಗೆ ಪದಗಳು ಸಿಗುತ್ತಿಲ್ಲ. ಪುಟ್ಟರಾಜು ಮತ್ತು ಮಾರೇಗೌಡ (ಅಪ್ಪಿ) ನಾನು ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಶ್ರೀಲಂಕಾದಲ್ಲಿ ನಡೆದ ದಾಳಿಗೆ ಧಿಕ್ಕಾರ, ಸ್ಫೋಟದಲ್ಲಿ ಸಾವನ್ನಪ್ಪಿದ ಎಲ್ಲರಿಗೂ ನನ್ನ ಸಂತಾಪ’ ಅಂತಾ ಟ್ವೀಟ್​ ಮಾಡಿದ್ದಾರೆ.