ಜಾಮೀನು ಸಿಗಲೆಂದು ತುಳಸಿಕಟ್ಟೆ ಸುತ್ತಿದ ದುನಿಯಾ ವಿಜಿ!

ಬೆಂಗಳೂರು: ಜಿಮ್​ ಟ್ರೈನರ್​ ಮಾರುತಿ ಗೌಡ ಮೇಲೆ ನಟ ದುನಿಯಾ ವಿಜಯ್​ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸೆಷನ್ಸ್‌ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್​ ಜಾಮೀನು ಸಿಗಲೆಂದು ದೇವರ ಮೊರೆ ಹೋಗಿದ್ದಾರೆ. ಬೆಳ್ಳಂ ಬೆಳಗ್ಗೆ ಎದ್ದು ಜೈಲು ಆವರಣದಲ್ಲಿರುವ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಜಾಮೀನು ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿರುವ ವಿಜಯ್​ ಬೆಳಗ್ಗೆ 6 ಗಂಟೆಗೇ ಎದ್ದು ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದ್ರು. ಅಲ್ಲದೇ ಜಾಮೀನು ಸಂಬಂಧ ತಿಳಿದುಕೊಳ್ಳಲು ಟಿವಿ ನೋಡಲು ಅವಕಾಶ ಕೋರಿದ್ದಾರೆ. ಆದ್ರೆ ಜೈಲು ಅಧಿಕಾರಿಗಳು ಆಮೇಲೆ ನೋಡೋಣ ಎಂದಷ್ಟೇ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv