‘ಹುಟ್ಟುಹಬ್ಬದ ಶುಭಾಶಯಗಳು’ ಹೇಳೋಕೆ ಬರ್ತಾರೆ ದಿಗಂತ್!

ದೂದ್‌ ಪೇಡ ದಿಗಂತ್ ಸ್ಯಾಂಡಲ್ವುಡ್‌ನಲ್ಲಿ ಮತ್ತೊಂದು ಕಥೆ ಶುರು ಮಾಡಲಿದ್ದಾರೆ. ದಿಗಂತ್ ಕಳೆದ ವರ್ಷ ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಇತ್ತು. ಅದಕ್ಕಿಗ ತೆರೆ ಬಿದ್ದಿದ್ದು, ಈಗ ಹುಟ್ಟುಹಬ್ಬದ ಶುಭಾಶಯ ಕೋರಲು ಬರ್ತಿದ್ದಾರೆ. ದಿಗಂತ್ ಹುಟ್ಟುಹಬ್ಬದ ಶುಭಾಶಯಗಳು ಅನ್ನೋ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

ನಾಗರಾಜ್ ಬೇತೂರ್ ಚೊಚ್ಚಲ ನಿರ್ದೇಶನವಿದ್ದು, ಚಿತ್ರ ಕಾಮಿಡಿ ಥ್ರಿಲ್ಲರ್ ಜಾನರ್‌ನಿಂದ ಕೂಡಿರಲಿದೆ. ಇದೇ ತಿಂಗಳ ಕೊನೆಯಲ್ಲಿ ಚಿತ್ರ ಸೆಟ್ಟೇರಲಿದೆ. ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಿಧುನ್ ಮುಕುಂದನ್ ಸಂಗೀತ ನೀಡಲಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಲಿದ್ದಾರೆ. ಈಗಾಗ್ಲೇ ಚಿತ್ರದ ಟೈಟಲ್ ಪೋಸ್ಟರ್‌ ರಿಲೀಸ್ ಆಗಿದ್ದು ಕುತೂಹಲ ಕೆರಳಿಸಿದೆ. ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ದಿಗಂತ್ ಯುವ ರೆಸಾರ್ಟ್ ಮಾಲೀಕನಾಗಿ, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ದಿಗಂತ್‌ಗೆ ಹೀರೋಯಿನ್ ಯಾರು? ತಾರಾಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.