ಅಂಬಿ ಹುಟ್ಟುಹಬ್ಬದಂದು ಚಾಮುಂಡಿ ದರ್ಶನ ಪಡೆದ ದರ್ಶನ್

ಇವತ್ತು ‘ಮಂಡ್ಯದ ಗಂಡು’ ರೆಬಲ್ ಸ್ಟಾರ್ ಅಂಬರೀಶ್​ ಹುಟ್ಟುಹಬ್ಬದ ನೆನಪು ಒಂದೆಡೆಯಾದ್ರೆ. ಇನ್ನೊಂದೆಡೆ ಪತ್ನಿ ಸುಮಲತಾ ಅಂಬರೀಶ್ ಮಂಡ್ಯಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರೋ ಸಂಭ್ರಮದಲ್ಲಿದ್ದಾರೆ. ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮಂಡ್ಯದ ಮತದಾರರಿಗೆ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇವತ್ತು ಕಾರ್ಯಕ್ರಮಕ್ಕೂ ಮುನ್ನ ದರ್ಶನ್ ಮೈಸೂರಿನ ಚಾಮುಂಡಿ ದೇವಿ ದರ್ಶನ ಪಡೆದಿದ್ದಾರೆ. ಚುನಾವಣೆಯಲ್ಲಿ ದರ್ಶನ್ ಮತ್ತು ಯಶ್ ಅಮ್ಮನ ಪರವಾಗಿ ಜೋಡೆತ್ತುಗಳಂತೆ ಪ್ರಚಾರ ಮಾಡಿದ್ರು. ಅದ್ರಂತೆ ಇಂದು ದರ್ಶನ್, ಯಶ್, ದೊಡ್ಡಣ್ಣ , ರಾಕ್ ಲೈನ್ ವೆಂಕಟೇಶ್, ಅಭಿಷೇಕ್​ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv