‘ಕೆಜಿಎಫ್​’ ಖಳನಟನಿಗೆ ‘ಅರ್ಜುನ್​ ಸರ್ಜಾ’ ಸ್ಪೆಷಲ್​ ಟ್ರೀಟ್..!

ಕೆಜಿಎಫ್​ ಸಿನಿಮಾದಿಂದ ಅದೆಷ್ಟೋ ಹೊಸಬರು ಕನ್ನಡ ಇಂಡಸ್ಟ್ರಿಯ ಮುನ್ನೆಲೆಗೆ ಬಂದರು. ಕೆಜಿಎಫ್​ ದೊಡ್ಡ ತಾರಾಗಣದ ಸಿನಿಮಾ. ಸಾವಿರಾರು ಜೂನಿಯರ್ ಆರ್ಟಿಸ್ಟ್​ ಜೊತೆಗೆ ಪ್ರಮುಖ ಪಾತ್ರಗಳಿದ್ದವು. ಅದರಲ್ಲೂ ವಿಲನ್ಸ್​ ದೊಡ್ಡ ದಂಡೇ ಸಿನಿಮಾದಲ್ಲಿತ್ತು. ಗರುಡ, ಕಮಲ್​, ಸೂರ್ಯ ವರ್ಧನ್​, ವಾನರಂ, ಕುಲಕರ್ಣಿ… ಹೀಗೆ ಹತ್ತಾರು ಖಳನಟರು ನೆನಪಿನಲ್ಲಿ ಉಳಿಯುತ್ತಾರೆ. ಅದರಂತೆ ಕೆಜಿಎಫ್​ನಲ್ಲಿ ಅಬ್ಬರಿಸೋ ಮತ್ತೊಂದು ಸ್ಟೈಲಿಶ್​ ಪಾತ್ರ ಆ್ಯಂಡ್ರ್ಯೂ. ಈ ಪಾತ್ರದಲ್ಲಿ ಅವಿನಾಶ್​ ಅನುಭವಿ ನಟನಂತೆ ಗುರುತಿಸಿಕೊಂಡಿದ್ದರು. ಮೊದಲ ಸಿನಿಮಾದಲ್ಲೇ ದೊಡ್ಡ ಹೆಸರು ಗಿಟ್ಟಿಸಿದ್ದರು. ಇದೀಗ ಅವಿನಾಶ್ ಟ್ಯಾಲೆಂಟ್ ಗುರುತಿಸಿದ ಬಹುಭಾಷಾ ನಟ ಅರ್ಜುನ್​ ಸರ್ಜಾ, ಅವಿನಾಶ್​ಗೆ ಸ್ಪೆಷಲ್​ ಟ್ರೀಟ್ ನೀಡಿದ್ದಾರೆ.

ಇದೊಂದು ಮಿರಾಕಲ್​..!
ಅರ್ಜುನ್ ಸರ್ಜಾ ಇಂಥದ್ದೊಂದು ಸರ್ಪ್ರೈಸ್ ಕೊಟ್ಟಿರೋದು ಅವಿನಾಶ್​ಗೆ ಖುಷಿ ತಂದಿದೆ. ‘ಇದೊಂದು ಮಿರಾಕಲ್​. ಅರ್ಜುನ್ ಸರ್ಜಾ ಸರ್​ ಕೆಜಿಎಫ್​ ಯಶಸ್ಸು ಕಂಡು ಪ್ರೋತ್ಸಾಹಿಸಿದ್ದಾರೆ. ನನ್ನ ಪಾತ್ರವನ್ನು ಗುರುತಿಸಿ ಕರೆಸಿ ಟ್ರೀಟ್​ ನೀಡಿದ್ದಾರೆ’ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv