ಸಕ್ಸಸ್​ ಖುಷಿಗೆ ‘ಮೈಸೂರ್​​ ಪಾಕ್’ ಸವಿದ ಅನಂತ್​ನಾಗ್​..!

ನೆನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾದ ‘ಕವಲುದಾರಿ’ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದೆ. ವಿಭಿನ್ನ ಕ್ರೈಂ ಥ್ರಿಲ್ಲರ್ ಕಥೆಯನ್ನು ಪ್ರೇಕಕರಿಗೆ ತಲುಪಿಸುವಲ್ಲಿ ಚಿತ್ರತಂಡ ಗೆದ್ದಿದೆ. ಸಿನಿರಸಿಕರಿಗೆ ಹೊಸದೊಂದು ಅನುಭವ ನೀಡಿತ್ತು. ಎಲ್ಲಾ ವರ್ಗದ ಪ್ರೇಕ್ಷಕರೂ ಸಿನಿಮಾಗೆ ಜೈ ಅಂದಿದ್ದರು. ಇದೀಗ ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿದ್ದು, ಸಕ್ಸಸ್​ ಖುಷಿಗೆ ಮಸಾಲೆ ದೋಸೆ, ಮೈಸೂರು ಪಾಕ್​ ಸವಿದಿದೆ.
ತಂಡದ ಜೊತೆಗೆ ಅನಂತ್​ನಾಗ್​ ದಂಪತಿ..!
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’.. ಅನಂತ್​ನಾಗ್​ ನಟನೆಗೆ ಹಿಡಿದ ಮತ್ತೊಂದು ಕನ್ನಡಿ. ಸಿನಿಮಾ ಅದ್ಭುತ ಯಶಸ್ಸಿನಿ ಜೊತೆಗೆ, ಸೌತ್ ಇಂಡಿಯಾ ಮಂದಿಯಿಂದ ಉತ್ತಮ ವಿಮರ್ಶೆ ಗಿಟ್ಟಿಸಿತ್ತು. ಇದೇ ತಂಡದ ಜೊತೆಗೆ ಅನಂತ್​ನಾಗ್​ ‘ಕವಲುದಾರಿ’ಯಲ್ಲೂ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಹೇಮಂತ್​ ರಾವ್​ ಮತ್ತೊಂದು ಇಂಟರೆಸ್ಟಿಂಗ್​ ಕಥೆಯನ್ನು ಹೊತ್ತು ತಂದಿದ್ದು, ‘ಕವಲುದಾರಿ’ ಸಿನಿಮಾನಾ ಜನರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿನಿಮಾದ ಯಶಸ್ಸನ್ನು ಚಿತ್ರತಂಡ ಸಿಂಪಲ್ಲಾಗಿ ಆಚರಿಸಿದೆ. ಈ ಸಿಂಪಲ್​ ಸೆಲೆಬ್ರೇಷನ್​ನಲ್ಲಿ ಅನಂತ್​ನಾಗ್​, ಗಾಯತ್ರಿ, ರಿಷಿ ಹಾಗೂ ಹೇಮಂತ್​ ರಾವ್​ ಭಾಗಿಯಾಗಿದ್ದರು. ಸಕ್ಸಸ್ ಖುಷಿಗೆ ಮಸಾಲೆ ದೋಸೆ, ಮೈಸೂರು ಪಾಕ್​ ಸವಿದು ಖುಷಿ ಹಂಚಿಕೊಂಡಿದೆ. ಈ ಸಂಭ್ರಮವನ್ನು ರಿಷಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv