ಅಜಯ್ ರಾವ್‌ಗೆ ಡಬಲ್ ಸಂಭ್ರಮ!

ಅಜಯ್ ​​ರಾವ್ ಪುಟ್ಟಮಗುವಿಗೆ ಈಗ ಆರು ತಿಂಗಳ ಸಂಭ್ರಮ. ಮುದ್ದು ಕಂದನ ಆಗಮನ, ನಗು, ಅಳು, ಆಟ ಅಜಯ್ ಕುಟುಂಬದ ಸಂತಸವನ್ನು ದುಪ್ಪಟ್ಟು ಮಾಡಿದೆ. ನವೆಂಬರ್23 ರಂದು ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಇದೀಗ ಅಜಯ್​​ ಮುದ್ದು ಮಗಳಾದ ಚೆರಿಶ್ಮಳಿಗೆ 6 ತಿಂಗಳಾಗಿದ್ದು, ತಮ್ಮ ಮಗಳ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ವೈಟ್​​ ಆಂಡ್​​ ಪಿಂಕ್​​ ಡ್ರೆಸ್‌ನಲ್ಲಿ ಮಿಂಚಿಂಗ್‌!
ಇಂದು ಅಜಯ್​​ ಪತ್ನಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಜಯ್​​ ಟ್ವಿಟ್ಟರ್​​ ಮೂಲಕ ಹ್ಯಾಪಿ ಬರ್ತ್ ಡೇ ಸ್ವಪ್ನ ಎಂದು ಪತ್ನಿಗೆ ಶುಭಾಶಯ ಕೋರಿದ್ದಾರೆ. ಇದೇ ಸಮಯದಲ್ಲಿ ಸ್ವಪ್ನ ತಮ್ಮ ಮಗಳೊಂದಿಗೆ ಕೂತಿರುವ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಮುದ್ದು ಕಂದನ ವೈಟ್​​ ಆಂಡ್​​ ಪಿಂಕ್​​ ಡ್ರೆಸ್​​ ಹಾಕಿ ಕೂತಿರುವ ಆ ಫೋಟೋಗೆ ಅಭಿಮಾನಿಗಳ ಲೈಕ್ ಸಿಕ್ಕಾಪಟ್ಟೆ ಜೋರಾಗೆ ಇದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv