ಹೋರಾಟಗಾರರನ್ನು ಗೂಂಡಾಗಳಿಗೆ ಹೋಲಿಸುತ್ತಿದೆ ಸರ್ಕಾರ: ಹೋರಾಟಗಾರ ಆಕ್ರೋಶ

ಧಾರವಾಡ: ಮಹಾದಾಯಿ ಹೋರಾಟಗಾರರಿಗೆ ತಾಲ್ಲೂಕು ದಂಡಾಧಿಕಾರಿ ಕಚೇರಿ ನೋಟಿಸ್ ಜಾರಿಗೊಳಿಸಿದೆ. 107 ಕಲಂ ಅನ್ವಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಸ್ವಯಂಕೃತ ದೂರು ದಾಖಲು ದಾಖಲಿಸಲಾಗಿದೆ. ಹೋರಾಟಗಾರ ಲೋಕನಾಥ ಹೆಬಸೂರ ಸೇರಿದಂತೆ ಇನ್ನೂ ಹಲವರ ಮೇಲೆ ಕೇಸ್ ದಾಖಲಾಗಿದ್ದು, ಶಾಂತಾ ಭಂಗ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ನೋಟಿಸ್ ಜಾರಿಯಾಗಿದೆ.

ಇನ್ನು ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ರೈತರು ಹಾಜರಾಗಿದ್ದಾರೆ. ಈ ಹಿಂದೆ ಮಹಾದಾಯಿ ಹೋರಾಟದ ವೇಳೆ 187 ರೈತರ ಮೇಲೆ ಕೇಸ್ ದಾಖಲಿಸಲಾಗಿತ್ತು. ತೀವ್ರ ಟೀಕೆ ವ್ಯಕ್ತವಾದ ಬಳಿಕ ಸರಕಾರ ರೈತರ ಮೇಲಿನ ಕೇಸ್ ವಾಪಸು ಪಡೆಯುವುದಾಗಿ ಹೇಳಿತ್ತು. ಆದ್ರೆ ಇನ್ನೂ ರೈತರ ಮೇಲಿನ ಕೇಸ್ ಗಳನ್ನ ಸರ್ಕಾರ ವಾಪಸ್ ಪಡೆದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಹೋರಾಟಗಾರರನ್ನು ಗೂಂಡಾಗಳಿಗೆ ಸರ್ಕಾರ ಹೋಲಿಸುತ್ತಿದೆ ಎಂದು ಮಹಾದಾಯಿ ಹೋರಾಟಗಾರರು ಆರೋಪಿಸಿದ್ದಾರೆ. ಅಲ್ಲದೇ, ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡೋದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv