ಉಪನ್ಯಾಸಕರುಗಳ ತರಬೇತಿ ಕಾರ್ಯಕ್ರಮಕ್ಕೆ ಗೈರಾದವರ ವಿರುದ್ಧ ಶಿಸ್ತುಕ್ರಮ

ಬೆಂಗಳೂರು : ಪ್ರಸ್ತುತ ಸಾಲಿನ ಉಪನ್ಯಾಸಕರುಗಳ ತರಬೇತಿ ಕಾರ್ಯಕ್ರಮಕ್ಕೆ ಗೈರಾದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳ ಉಪನ್ಯಾಸಕರಿಗೆ, ಕಳೆದ ತಿಂಗಳು 7 ದಿನಗಳ ಕಾಲ ತರಬೇತಿ ಕಾರ್ಯಕ್ರಮ ನಡೆದಿತ್ತು. ತರಬೇತಿಗೆ ಬಂದವರ ಹಾಜರಾತಿಯನ್ನು ಪ್ರತಿದಿನ ಬಯೋಮೆಟ್ರಿಕ್​ನಲ್ಲಿ ಪಡೆಯಲಾಗಿದೆ. ಜಿಲ್ಲಾ ಉಪನಿರ್ದೇಶಕರು, ಗೈರು ಹಾಜರಾದ ಉಪನ್ಯಾಸಕರಿಂದ ಆಯಾ ದಿನವೇ ಕಾರಣ ಕೇಳಿ ನೋಟಿಸ್​ ನೀಡಿರುವ ಬಗ್ಗೆ ಇ-ಮೇಲ್​ ಮೂಲಕ ನಿರ್ದೇಶಕರಿಗೆ ಮಾಹಿತಿ ನೀಡಬೇಕು ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ದಾಖಲಾತಿ ಅವಧಿ ವಿಸ್ತರಣೆ 2018-19 ನೇ ಸಾಲಿನ ಪ್ರಥಮ ಪಿಯು ದಂಡ ಶುಲ್ಕದೊಂದಿಗೆ (2890) ದಾಖಲಾತಿಯಾಗಲು ಇದೇ 16ರವರೆಗೆ ವಿಸ್ತರಿಸಲಾಗಿದೆ. ಈ ಸಾಲಿನಲ್ಲಿ ಮತ್ತೊಮ್ಮೆ ಅವಧಿ ವಿಸ್ತರಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.