5ನೇ ಮದುವೆಗೆ ಸಿದ್ಧತೆ ನಡೆಸಿದ್ದ ವಂಚಕ: ಫೇಸ್‌ಬುಕ್‌ ಫೋಟೋಗಳಿಂದ ಬಯಲಾಯ್ತು ಬಣ್ಣ

ಬೆಂಗಳೂರು: 4 ಮದುವೆಯಾಗಿ 5ನೇ ಮದುವೆಗೂ ಸಿದ್ಧನಾಗಿದ್ದ ಖದೀಮ ವರನೊಬ್ಬ ಫೇಸ್‌ಬುಕ್‌ ಫೋಟೋಗಳಿಂದ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡು ಮೂಲದ ಅಮಾನುಲ್ಲಾ ಬಾಷಾ ದುಬೈನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದ. ಆಗಾಗ ಭಾರತಕ್ಕೆ ಬಂದು ವರದಕ್ಷಿಣೆ ಆಸೆಗಾಗಿ ಮುಗ್ಧರನ್ನ ವಂಚಿಸಿ ಮದುವೆಯಾಗಿ ವಿದೇಶಕ್ಕೆ ವಾಪಾಸ್ ಹೋಗುತ್ತಿದ್ದ.

ಇತ್ತೀಚಿಗೆ  ಆತ ಬಂದಾಗ ಕೆ.ಜಿ ಹಳ್ಳಿ ನಿವಾಸಿಯೊಬ್ಬರ ಪುತ್ರಿಯನ್ನ ಮೇ 23ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ. ಯುವತಿ ಪೋಷಕರು ಮದುವೆ ಫೋಟೋಗಳನ್ನ ಫೇಸ್​​​ಬುಕ್ ನಲ್ಲಿ ಹಂಚಿಕೊಂಡಿದ್ರು. ಈ ಪೋಟೋಗಳನ್ನ ನೋಡಿ ಯುವತಿಯ ಪೋಷಕರಿಗೆ ಕರೆಗಳು ಬರಲಾರಂಭಿಸಿದ್ದವು. ಫೋನ್ ಮಾಡಿದ ಅಮಾನುಲ್ಲಾ ಬಾಷಾ ಪತ್ನಿಯರು ವರನ ಅಸಲಿಯತ್ತು ಬಿಚ್ಚಿಟ್ಟಿದ್ರು. ಆಗಲೇ ಗೊತ್ತಾಗಿದ್ದು ಅಮಾನುಲ್ಲಾ ಈಗಾಗಲೇ 4 ಮದುವೆಯಾಗಿದ್ದಾನೆ ಎಂದು.

ಇಷ್ಟೇ ಅಲ್ಲ ಈತ 5ನೇ ಮದುವೆಗೂ ಸಿದ್ಧತೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಗಾಬರಿಗೊಂಡ ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿಯ ಬಣ್ಣ ಬಯಲಾಗಿದೆ. ನಂತ್ರ ಕೆ.ಜಿ ಹಳ್ಳಿ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ರು. ಆರೋಪಿ ಜೊತೆಗೆ ಆತನ ತಂದೆ ಬಾಷಾ ಹಾಗೂ ಝಾಕೀರ್ ಹುಸೇನ್ ಎಂಬಾತ ಕೂಡ ವಂಚನೆಯಲ್ಲಿ ಭಾಗಿಯಾಗಿದ್ರು. ತಮಿಳುನಾಡಿಗೆ ಇವರೆಲ್ಲಾ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗಲೇ ಕೆ.ಜಿ ಹಳ್ಳಿ ಪೋಲೀಸರು ಬಂಧಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv