ಸಾಲ ತಂದಿದ್ದ ಹಣ, ಮನೆಗೆ ಬೆಂಕಿಬಿದ್ದು ಭಸ್ಮವಾಯ್ತು

ದಕ್ಷಿಣ ಕನ್ನಡ: ಬೆಳ್ತಂಗಡಿಯ ಓಡಿನ್ನಾಳ ಗ್ರಾಮದ ಅಮರ್ಜಾಲ್ ನಲ್ಲಿ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದೆ. ಶ್ರೀಧರ ಆಚಾರಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಶ್ರೀಧರ ನಿನ್ನೆ ಸಾಲವೆಂದು ಪಡೆದು ತಂದಿದ್ದ 55,000 ಹಣ ಕೂಡಾ ಬೆಂಕಿಯಲ್ಲಿ ಆಹುತಿಯಾಗಿವೆ. ಶ್ರೀಧರ ಆಚಾರಿ, ಸುಮತಿ ಎಂಬುವವರನ್ನು ಮದುವೆಯಾಗಿದ್ದರು. ಇವರೂ ತೀರಾ ಕಡುಬಡವರಾಗಿದ್ದು, ಇದ್ದ ಒಂದು ಮನೆಯನ್ನು ಕೂಡಾ ಕಳೆದುಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv