ಗೋವಾದಲ್ಲಿ ಅಪಘಾತ, ಮಾಗಡಿ ಠಾಣೆ ಪೇದೆ ದುರ್ಮರಣ

ರಾಮನಗರ: ಜಿಲ್ಲೆಯ ಮಾಗಡಿ ಠಾಣೆ ಪೊಲೀಸ್ ಪೇದೆ ಗೋವಾದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಾಸ್ಕೋದಲ್ಲಿರುವ ದಾಬೋಲಿನ್​ ಏರ್​ಪೊರ್ಟ್ ರೋಡ್​ ಬಳಿ ಘಟನೆ ನಡೆದಿದೆ. ಮಾಗಡಿ ಠಾಣೆಯ ​ಪೇದೆ ಕಾರಿಯಪ್ಪ (32) ಮೃತ ದುರ್ದೈವಿ.

ಇತ್ತೀಚೆಗೆ ಕಾರಿಯಪ್ಪ ಹಾಗೂ ಮತ್ತೊಬ್ಬ ಪೇದೆ ನರಸಿಂಹಮೂರ್ತಿ, ಪ್ರವಾಸಕ್ಕೆಂದು ಗೋವಾಗೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಹಿಂದಿರುಗಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ​ಪೇದೆ ನರಸಿಂಹಮೂರ್ತಿ ಅಪಾಯದಿಂದ ಪಾರಾಗಿದ್ದಾರೆ. ಆದ್ರೆ, ಕಾರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಘಟನೆ ಬಗ್ಗೆ ತಿಳಿದು ಮಾಗಡಿ ಠಾಣೆ ಸಿಪಿಐ ಶಬರೀಶ್​ ಗೋವಾಕ್ಕೆ ತೆರಳಿದ್ದಾರೆ.

Leave a Reply

Your email address will not be published. Required fields are marked *