ತಿಥಿಗೆ ಸಾಮಗ್ರಿ ಖರೀದಿಸಲು ಬಂದವನೇ ಮಸಣ ಸೇರಿದ

ರಾಮನಗರ: ​ಸಂಬಂಧಿಕರ ತಿಥಿ ಕಾರ್ಯಕ್ಕೆ ಸಾಮಾನು ಖರೀದಿಸಲು ಬಂದವನು, ಅಪಘಾತಕ್ಕೆ ತುತ್ತಾಗಿ ತಾನೇ ಸಾವಿನ ಮನೆ ಸೇರಿದ ದುರಂತ ಘಟನೆಯಿದು. ಚನ್ನಪಟ್ಟಣ ತಾಲ್ಲೂಕಿನ ಅರೆಭೊವಳ್ಳಿ ಗ್ರಾಮದ ಸುನೀಲ್​ ಎಂಬ ಯುವಕ ತನ್ನ ಸಂಬಂಧಿಕರ ತಿಥಿ ಕಾರ್ಯಕ್ಕೆ ಸಾಮಾನು ಖರೀದಿಗಾಗಿ ಬೈಕ್‌ನಲ್ಲಿ ತೆರಳಿದ್ದ. ರಾಮನಗರ ಜಿಲ್ಲೆಯ ಕನಕಪುರ ಅರಣ್ಯ ಇಲಾಖೆ ಕಚೇರಿ ಎದುರು ಸುನೀಲ್ ಓಡಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಸುನೀಲ್​,​ ಸ್ಥಳದಲ್ಲೆ ಪ್ರಾಣಬಿಟ್ಟಿದ್ದಾನೆ. ಕನಕಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಟಾಟಾ ಏಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *