ಗ್ಯಾಸ್ ಸಿಲಿಂಡರ್ ಲಾರಿ-ಬೈಕ್ ಡಿಕ್ಕಿ: ಎರಡೂ ವಾಹನಗಳು ಭಸ್ಮ..!

ಬೆಂಗಳೂರು: ಗ್ಯಾಸ್ ಸಿಲಿಂಡರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಎರಡೂ ವಾಹನಗಳು ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.  ನಗರದ ಹೊರವಲಯದಲ್ಲಿನ ಮಂಡೂರು ಸಮೀಪದ ಕಟ್ಟುಗೊಲ್ಲಹಳ್ಳಿ ಬಳಿ ಈ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವನಹಳ್ಳಿ ತಾಲೂಕಿನ ಭಟ್ಟರಮಾರೆನಹಳ್ಳಿ ನಿವಾಸಿ ಸೋಮಶೇಖರ್ ಮೃತ ಬೈಕ್ ಸವಾರ. ಇನ್ನು ಅಪಘಾತದ ಪರಿಣಾಮ ಬೂದಿಗೆರೆ ಮಾರ್ಗದ ಏರ್​ಪೋರ್ಟ್​ ರೋಡ್ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: conatct@firstnews.tv