ಬಸ್ ಮತ್ತು ಬೈಕ್​ ಮುಖಾಮುಖಿ ಡಿಕ್ಕಿ: ಬೈಕ್​ ಸವಾರ ಪಾರು.!

ಮಂಗಳೂರು: ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಚಲಿಸುತ್ತಿದ್ದ ಬಸ್​ ಮತ್ತು ಮಾಣಿ ಕಡೆಯಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ, ಬಂಟ್ವಾಳದ ಮಾಣಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಬೈಕ್, ಬಸ್​ ಕೆಳಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ಸವಾರ ಅದೃಷ್ಟವಶಾತ್ ಅನಂತಾಡಿ ನಿವಾಸಿ ಮೋಹನ್ ಅಪಾಯದಿಂದ ಪಾರಾಗಿದ್ದಾರೆ.