ಕಾರು-ಬೈಕ್​ ಡಿಕ್ಕಿ ಓರ್ವ ಸಾವು..

ಹಾಸನ: ಬೈಕ್ ಗೆ ಕಾರು ಡಿಕ್ಕಿಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊರವಲಯದ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಹಾಸನದ ಧರ್ಮಪ್ರಕಾಶ್ (55) ಮೃತ ದುರ್ದೈವಿ. ಧರ್ಮ ಪ್ರಕಾಶ್,​ ಮಗಳ‌ ವರ್ಗಾವಣೆ ಪತ್ರ ತರಲು ಎಚ್.ಕೆ.ಎಸ್ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್​ ಹಿಂಬದಿಯಲ್ಲಿ ಕೂತಿದ್ದ ಪುತ್ರಿ ಪ್ರಿಯಾಂಕ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಹಾಸನ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv