ಚೌಡೇಶ್ವರಿ ಜಾತ್ರಾ ಮಹೋತ್ಸವ, ಸಜ್ಜೆ ಕುಸಿದು 20ಕ್ಕೂ ಹೆಚ್ಚು ಜನರಿಗೆ ಗಾಯ

ತುಮಕೂರು: ಸಜ್ಜೆ ಕುಸಿದು ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ  ಕುಣಿಗಲ್ ತಾಲ್ಲೂಕಿನ ಉಜ್ಜನಿ ಎಂಬ ಗ್ರಾಮದಲ್ಲಿ ಸಂಭವಿಸಿದೆ. ಐತಿಹಾಸಿಕ ಚೌಡೇಶ್ವರಿ ಜಾತ್ರಾ ಮೆರವಣಿಗೆ ವೇಳೆ ಈ ದುರಂತ ಸಂಭವಿಸಿದೆ. ಭಕ್ತಾದಿಗಳು ಮನೆಯೊಂದರ ಸಜ್ಜೆ ಮೇಲೇರಿ ಉತ್ಸವವನ್ನು ವೀಕ್ಷಿಸುತ್ತಿದ್ದ ವೇಳೆ ಭಾರ ಹೆಚ್ಚಾಗಿ ಸಜ್ಜೆ ಕುಸಿದು ಬಿದ್ದಿದ್ದು, ಸಜ್ಜೆ ಕೆಳಗಿದ್ದವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಬೆಂಗಳೂರು ಹಾಗೂ ಕುಣಿಗಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv