ಅಪರಿಚಿತ ವಾಹನ ಡಿಕ್ಕಿ ಐಚ್ಚರ್​ ವಾಹನ ಚಾಲಕ ಸ್ಥಳದಲ್ಲೇ ಸಾವು

ನೆಲಮಂಗಲ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಐಚ್ಚರ್ ವಾಹನ ಚಾಲಕ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದೊಡ್ಡೇರಿ ಗೇಟ್ ಬಳಿ ನಡೆದಿದೆ.

ರಾಷ್ರೀಯ ಹೆದ್ದಾರಿ 4ರಲ್ಲಿ ಐಚ್ಚರ್ ಚಾಲಕ ತನ್ನ ವಾಹನ ನಿಲ್ಲಿಸ ಮೂತ್ರ ವಿಸರ್ಜನೆಗೆಂದು ಗಾಡಿಯಿಂದ ಇಳಿದಿದ್ದ. ಈ ವೇಳೆ ಅಪರಿಚತ ವಾಹನೊಂದು ಆತನಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಐಚ್ಚರ್ ಚಾಲಕ ಶಿವಣ್ಣ (49) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಐಚ್ಚರ್ ವಾಹನ ತಮಕೂರು ಜಿಲ್ಲೆ ಪಾವಗಡದಿಂದ ಕೋಲಾರಕ್ಕೆ ತೆರಳುತ್ತಿತ್ತು. ಘಟನೆ ಸಮಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *